ಬೆಂಗಳೂರು: ‘ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವೇ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಕಾರಣ’ ಎಂದು ಕೆಪಿಸಿಸಿ ರಚಿಸಿದ ಶಾಸಕ ಜಿ. ಪರಮೇಶ್ವರ ನೇತೃತ್ವದ ಸತ್ಯಶೋಧನಾ ಸಮಿತಿ ಹೇಳಿದೆ.
ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಮಿತಿ ತನ್ನ ವರದಿ ಸಲ್ಲಿಸಿದೆ. ಗಲಭೆಗೆ ಕಾರಣ, ನಷ್ಟ ಅನುಭವಿಸಿ
ದವರು, ದಾಖಲಾದ ದೂರು, ಪೊಲೀಸರ ಕಾರ್ಯವೈಖರಿ ಪರಿಶೀಲಿಸಿ ಸಮಿತಿ ತನ್ನ ಅಭಿಪ್ರಾಯವನ್ನು ವರದಿಯಲ್ಲಿ ವ್ಯಕ್ತ
ಪಡಿಸಿದೆ.
‘ರಾಜಕೀಯವಾಗಿ ಪಕ್ಷಗಳ ಕಾರ್ಯ ಕರ್ತರ ನಡುವೆ ಸಣ್ಣಪುಟ್ಟ ಸಮಸ್ಯೆಗಳು ಇದ್ದರೂ ಅದೊಂದೇ ಘಟನೆಗೆ ಕಾರಣವಲ್ಲ. ಗಲಭೆ ಆರಂಭಗೊಂಡು ನಾಲ್ಕು ಗಂಟೆ ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಳಂಬ ಘಟನೆ ತೀವ್ರ ಸ್ವರೂಪ ಪಡೆ ದುಕೊಳ್ಳಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ತಿಳಿದು ಬಂದಿದೆ.
‘ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳು ವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲು ಸರ್ಕಾರ ತಡ ಮಾಡಿದೆ. ಅಲ್ಲದೆ, ಗುಪ್ತಚರ ಇಲಾಖೆ ನಡೆಯಬಹುದಾದ ಘಟನೆಯನ್ನು ಮೊದಲೇ ಅರಿಯಲು ವಿಫಲವಾಗಿದೆ’ ಎಂದೂ ವರದಿಯಲ್ಲಿದೆ ಎನ್ನಲಾಗಿದೆ.
‘ಘಟನೆಗೆ ಮಾಜಿ ಮೇಯರ್ ಸಂಪತ್ ರಾಜ್ ಅವರ ಪ್ರಚೋದ ನೆಯೂ ಕಾರಣವಾಗಿತ್ತು ಎಂಬ ಬಗ್ಗೆ ವರದಿಯಲ್ಲಿ ಯಾವುದೇ ಪ್ರಸ್ತಾಪ ಇಲ್ಲ’ ಎಂದೂ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.