ADVERTISEMENT

ಗಣೇಶ ವಿಗ್ರಹ ವಿಸರ್ಜನೆಗೆ ನಾಲ್ಕು ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 19:47 IST
Last Updated 13 ಆಗಸ್ಟ್ 2019, 19:47 IST

ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿಗ್ರಹಗಳ ವಿಸರ್ಜನೆಗೆ ಬಿಬಿಎಂಪಿ ಹೊಸದಾಗಿ ನಾಲ್ಕು ಕಲ್ಯಾಣಿಗಳನ್ನು ನಿರ್ಮಾಣ ಮಾಡಿದೆ.

ನಗರದಲ್ಲಿ ಪ್ರತಿವರ್ಷ 20 ಕೆರೆಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲಾಗುತ್ತಿದೆ. ಈ ಬಾರಿ ಹೊಸದಾಗಿ ಈ ಪಟ್ಟಿಗೆ ನಾಲ್ಕು ಕಲ್ಯಾಣಿಗಳು ಸೇರ್ಪಡೆಯಾಗಿದ್ದು,ಮೇಸ್ತ್ರಿಪಾಳ್ಯ ಕೆರೆ, ಸಾದರಮಂಗಲ ಕೆರೆ, ಚಳ್ಳಕೆರೆ ಹಾಗೂ ಪಾಳನಹಳ್ಳಿ ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ.

‘ಒಂದು ವರ್ಷದ ಹಿಂದೆಯೇ ನಾಲ್ಕು ಕಲ್ಯಾಣಿಗಳನ್ನು ಸಿದ್ಧಗೊಳಿಸಲು ಯೋಜನೆ ರೂಪಿಸಲಾಗಿತ್ತು. ಹೊಸದಾಗಿ ನಿರ್ಮಿಸಲಾದ ಕಲ್ಯಾಣಿಗಳನ್ನು ಗಣೇಶ ವಿಗ್ರಹ ವಿಸರ್ಜನೆಗೆ ಬಳಸಿಕೊಳ್ಳಬಹುದಾಗಿದೆ. ಸ್ಥಳಾವಕಾಶ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗು
ವುದು’ ಎಂದುಬಿಬಿಎಂಪಿ ಕೆರೆ ವಿಭಾ ಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಗನ್ನಾಥ ರಾವ್ ತಿಳಿಸಿದರು.

ADVERTISEMENT

‘ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಧ್ವನಿವರ್ಧಕ ಬಳಸದಂತೆ ಜನರಿಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಗುರುತಿಸಲ್ಪಟ್ಟ ಕಲ್ಯಾಣಿ ಹಾಗೂ ತಾತ್ಕಾಲಿಕ ಕೊಳಗಳಲ್ಲಿ ಮಾತ್ರ ಗಣೇಶ ವಿಗ್ರಹ ವಿಸರ್ಜನೆ ಮಾಡಬೇಕು’ ಎಂದು ತಿಳಿಸಿದರು.ಯಡಿಯೂರು,ಕೈಕೊಂಡ್ರಹಳ್ಳಿ, ದೊಡ್ಡನೆಕ್ಕುಂದಿ, ಕಸವನಹಳ್ಳಿ,ಮುನ್ನೇಕೊಳಾಲ್‌,ದೊರೆಕೆರೆ,ಸಿಂಗಸಂದ್ರ,ಹೇರೋಹಳ್ಳಿ, ಮಲ್ಲತ್ತಹಳ್ಳಿ,ಉಲ್ಲಾಳ, ದಾಸರಹಳ್ಳಿ,ಸ್ಯಾಂಕಿ,ಹಲಸೂರು, ಕೋಗಿಲು, ಜಕ್ಕೂರು, ರಾಚೇನಹಳ್ಳಿ, ಅಟ್ಟೂರು, ಅಲ್ಲಾಳಸಂದ್ರ ಹಾಗೂ ದೊಡ್ಡಬೊಮ್ಮಸಂದ್ರ ಕೆರೆಯಲ್ಲಿ ಗಣೇಶ ವಿಗ್ರಹದ ವಿಸರ್ಜನೆಗೆ ಅವಕಾಶ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.