ಬೆಂಗಳೂರು: ಮಹಾರಾಷ್ಟ್ರದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮೊಹಿನುದ್ದೀನ್ ಅಲಿಯಾಸ್ ಶೇಕ್ (25), ಉಸ್ಮಾನ್ ರೆಹಮಾನ್ (28) ಹಾಗೂ ತನ್ವೀಶ್ (38)ನನ್ನು ಬಂಧಿಸಿ, 13 ಕೆ.ಜಿ. ಗಾಂಜಾ, 1 ಕೆ.ಜಿ ಹಶೀಷ್ ಹಾಗೂ 2 ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜೂನ್ 21ರಂದು ಬಿಎಚ್‌ಇಎಲ್ ಉದ್ಯಾನ ಬಳಿ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಗ್ರಾಹಕರಿಗೆ ಗಾಂಜಾ ಮಾರಲು ಯತ್ನಿಸುತ್ತಿದ್ದರು. ಬಂಧಿತರ ಪೈಕಿ ಒಬ್ಬ ಮಹಾರಾಷ್ಟ್ರದವ. ಆಗಾಗ ಊರಿಗೆ ಹೋಗಿ ಗಾಂಜಾ ಖರೀದಿಸಿ ಬಸ್‌ಗಳಲ್ಲಿ ನಗರಕ್ಕೆ ತರುತ್ತಿದ್ದ. ಇತರೆ ಆರೋಪಿಗಳ ಜೊತೆ ಸೇರಿ ಗ್ರಾಹಕರಿಗೆ ಮಾರುತ್ತಿದ್ದ. ಅದರಿಂದ ಬಂದ ಹಣವನ್ನು ಮೂವರು ಹಂಚಿಕೊಳ್ಳುತ್ತಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.