ADVERTISEMENT

ಗಾಂಜಾ-ಕೊಕೇನ್ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:11 IST
Last Updated 17 ಸೆಪ್ಟೆಂಬರ್ 2020, 7:11 IST

ಬೆಂಗಳೂರು: ಗಾಂಜಾ ಮತ್ತು ಕೊಕೇನ್ ಮಾರುತ್ತಿದ್ದ ನೈಜೀರಿಯಾದ ಇಬ್ಬರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಹುಣಸಮಾರನಹಳ್ಳಿಯಲ್ಲಿ ನೆಲೆಸಿದ್ದ ಥಾಮಸ್ (46) ಹಾಗೂ ಬಾಗಲೂರಿನಲ್ಲಿದ್ದ ಇಕೆಚುಕ್ವಾ ಡೇನಿಯಲ್‌ (39) ಬಂಧಿತ ಆರೋಪಿಗಳು.

'ನೈಜೀರಿಯಾದಿಂದ ಬಂದು ನಗರದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ವೇಳೆ ರಾಜೇಶ್ ಎಂಬುವನ ಪರಿಚಯವಾಗಿತ್ತು. ಆತನಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದೆವು' ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ADVERTISEMENT

ಇವರಿಂದ 2.26 ಕೆ.ಜಿ ಗಾಂಜಾ, 6 ಗ್ರಾಂ ಕೊಕೇನ್ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.