ADVERTISEMENT

ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಕಸದ ರಾಶಿ

ಕಸ ತೆಗೆಯುವವರಿಲ್ಲ–ಸಂಕಷ್ಟ ತಪ್ಪಿಲ್ಲ: ಸ್ಥಳೀಯರ ದೂರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 8:32 IST
Last Updated 22 ಜುಲೈ 2020, 8:32 IST
ವಿಶ್ವೇಶ್ವರಯ್ಯ ಲೇಔಟ್‌ನ‌ ರಾಮಸಂದ್ರ ಮುಖ್ಯರಸ್ತೆಯ ಬಳಿ ಮಂಗಳವಾರ ಕಂಡು ಬಂದ ಕಸದ ರಾಶಿ– ಪ್ರಜಾವಾಣಿ ಚಿತ್ರ /ಎಂ.ಎಸ್. ಮಂಜುನಾಥ್ 
ವಿಶ್ವೇಶ್ವರಯ್ಯ ಲೇಔಟ್‌ನ‌ ರಾಮಸಂದ್ರ ಮುಖ್ಯರಸ್ತೆಯ ಬಳಿ ಮಂಗಳವಾರ ಕಂಡು ಬಂದ ಕಸದ ರಾಶಿ– ಪ್ರಜಾವಾಣಿ ಚಿತ್ರ /ಎಂ.ಎಸ್. ಮಂಜುನಾಥ್    

ಬೆಂಗಳೂರು: ಚಿಕ್ಕಬಸ್ತಿ ಬಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಎಲ್ಲಿ ನೋಡಿದರಲ್ಲಿ ಕಸ ಸುರಿಯಲಾಗಿದೆ.

‘ವಿಶ್ವೇಶ್ವರಯ್ಯ ಲೇಔಟ್‌ ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆ. ಅಲ್ಲೊಂದು ಇಲ್ಲೊಂದು ಮನೆಗಳಿವೆ. ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಕಸವನ್ನು ಸುರಿಯಲಾಗುತ್ತಿದೆ. ರಾಮಸಂದ್ರದಿಂದ ನಗರಕ್ಕೆ ಹೋಗುವ ಎಲ್ಲರೂ ಇಲ್ಲಿಯೇ ಕಸ ಎಸೆದು ಹೋಗುತ್ತಾರೆ. ಬಿಬಿಎಂಪಿ ಪೌರಕಾರ್ಮಿಕ ಸಿಬ್ಬಂದಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಬಂದು ಕಸ ಒಯ್ಯುತ್ತಾರೆ’ ಎಂದು ಸ್ಥಳೀಯರು ದೂರುತ್ತಾರೆ.

‘ಒಂದೊಂದು ಕಡೆ ಕಿ.ಮೀ. ಉದ್ದದವರೆಗೆ ಕಸದ ರಾಶಿ ಹಾಕಲಾಗಿದೆ. ಅಕ್ಕ–ಪಕ್ಕದ ಕೋಳಿ ಅಂಗಡಿಗಳವರು ಮಾಂಸದ ತ್ಯಾಜ್ಯವನ್ನು ಇಲ್ಲಿ ಬಂದು ಸುರಿಯುತ್ತಾರೆ. ಇದನ್ನು ತಿನ್ನಲು ಬರುವ ನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿವೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ADVERTISEMENT

‘ಪಕ್ಕದಲ್ಲಿಯೇ ರಾಮಸಂದ್ರ ಕೆರೆ ಇದೆ. ಅದರ ಸುತ್ತಲೂ ಕಸವನ್ನು ಎಸೆದು, ಆ ಕೆರೆಯನ್ನೂ ಹಾಳು ಮಾಡುತ್ತಿದ್ದಾರೆ. ಚರಂಡಿ ನೀರನ್ನು ಇಲ್ಲಿಗೆ ಬಿಡಲಾಗುತ್ತಿದೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.