ADVERTISEMENT

ಗ್ಯಾಸ್‌ ರೀಫಿಲ್ಲಿಂಗ್‌ ದಂಧೆ: ₹ 3.73 ಲಕ್ಷ ಮೌಲ್ಯದ 383 ಸಿಲಿಂಡರ್ ವಶ

ಸಿಸಿಬಿಯಿಂದ 3 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:47 IST
Last Updated 20 ಮೇ 2020, 20:47 IST
ವಶಪಡಿಸಿಕೊಂಡ ಸಿಲಿಂಡರ್‌ಗಳು
ವಶಪಡಿಸಿಕೊಂಡ ಸಿಲಿಂಡರ್‌ಗಳು   

ಬೆಂಗಳೂರು: ನಗರದ ವಿವಿಧೆಡೆ ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು, ಆರು ಮಂದಿಯನ್ನು ಬಂಧಿಸಿ ₹ 3.73 ಲಕ್ಷ ಮೌಲ್ಯದ 384 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿದ್ದಾರ್ಥ್ ಲೇಔಟ್‌ನ ರಾಜು, ನಾಗರಬಾವಿಯ ಮಾರುತಿನಗರದ ಸಿ.ಎ. ಅಮರ್‌, ಹೆಗ್ಗನಹಳ್ಳಿಯ ಎಚ್‌. ಲಕ್ಷ್ಮಯ್ಯ, ಅನ್ನಪೂರ್ಣೇಶ್ವರಿನಗರದ ವಿನಯ್, ಆರ್‌.ಆರ್‌. ನಗರದ ಪ್ರಕಾಶ್‌, ರಾಜಗೋಪಾಲನಗರದ ತಿಮ್ಮಪ್ಪ ಬಂಧಿತರು. ಆರೋಪಿಗಳಿಂದ ರೀಫಿಲ್ಲಿಂಗ್‌ ರಾಡ್‌ಗಳು, ತೂಕದ ಯಂತ್ರಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಪೀಣ್ಯ, ಕೆಂಗೇರಿ, ಕಾಮಾಕ್ಷಿಪಾಳ್ಯ, ವಿಜಯನಗರ, ಆರ್‌.ಆರ್. ನಗರ ಮತ್ತು ರಾಜಗೋಪಾಲನಗರದಲ್ಲಿ ದಿಢೀರ್‌ ದಾಳಿ ನಡೆಸಿದ್ದಾರೆ.

ADVERTISEMENT

‘ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಆರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಿಸಿಬಿಯ ಆರ್ಥಿಕ ಅಪರಾಧ ದಳ ಮತ್ತು ಸಂಘಟಿತ ಅಪರಾಧ ದಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್‌ ಸಂದೀಪ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.