ADVERTISEMENT

‘ಗಾಯತ್ರಿ ಮಂತ್ರ ಪಠಣದಿಂದ ರೋಗನಿರೋಧಕ ಶಕ್ತಿ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 20:14 IST
Last Updated 9 ಫೆಬ್ರುವರಿ 2020, 20:14 IST
ಗಾಯತ್ರಿ ಮಹೋತ್ಸವದಲ್ಲಿ ಗಾಯತ್ರಿದೇವಿ ಮೂರ್ತಿ ಮೆರವಣಿಗೆ ನಡೆಯಿತು
ಗಾಯತ್ರಿ ಮಹೋತ್ಸವದಲ್ಲಿ ಗಾಯತ್ರಿದೇವಿ ಮೂರ್ತಿ ಮೆರವಣಿಗೆ ನಡೆಯಿತು   

ಬೆಂಗಳೂರು: ‘ದೇಹ ಹಾಗೂ ಚರ್ಮಕ್ಕೆ ಬರಬಹುದಾದ ರೋಗಗಳನ್ನು ತಡೆಯಲು ಸಹಾಯಕವಾಗಿರುವ ಗಾಯತ್ರಿ ಮಂತ್ರವು ನಮ್ಮಲ್ಲಿನರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ’ ಎಂದು ವಿದ್ವಾಂಸ ಅರಳು ಮಲ್ಲಿಗೆಪಾರ್ಥಸಾರಥಿ ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಯತ್ರಿ ಮಂತ್ರವು ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಆಲ್ ಇಂಡಿಯಾ
ಮೆಡಿಕಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್‌ ನಡೆಸಿದ ವರದಿಯೇ ಇದಕ್ಕೆ ಉದಾಹರಣೆ. ಈ ಮಂತ್ರವನ್ನುನಿರಂತರವಾಗಿ ಪಠಣೆ ಮಾಡುವುದರಿಂದ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಮಕ್ಕಳು ನಿತ್ಯಕನಿಷ್ಠ 10 ನಿಮಿಷ ಮಂತ್ರ ಪಠಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಮೆರವಣಿಗೆ:ಗಾಯತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಗಾಯತ್ರಿ ಹವನ ಹಾಗೂ ಗಾಯತ್ರಿ ದೇವಿಯ ಮೆರವಣಿಗೆ ನಡೆಯಿತು.

ಈ ವೇಳೆ ಶಶಿಧರ ಕೋಟೆ ಅವರು ಗಾಯತ್ರಿ ನಮನ ಸಲ್ಲಿಸಿದರು. ಬಳಿಕ ಶತಾವಧಾನಿ ಆರ್.ಗಣೇಶ್ ಗಾಯತ್ರಿ ತತ್ವಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ, ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.