ಬೆಂಗಳೂರು: ಗೀತಾ ಪರಿವಾರವು ಗೀತಾ ಕಲಿಕೆ ಆನ್‌ಲೈನ್ ತರಗತಿ ಆರಂಭಿಸಿ ಐದು ವರ್ಷಗಳನ್ನು ಪೂರೈಸಿದ ಪ್ರಯುಕ್ತ ಜೂನ್ 22ರಿಂದ ಆಗಸ್ಟ್ 3ರವರೆಗೆ ಆರು ದೇಶಗಳಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿದ್ದು, ನಗರದ ಬನಶಂಕರಿ 3ನೇ ಹಂತದಲ್ಲಿ ಶನಿವಾರ ‘ಸಂಭ್ರಮಾಚರಣೆ’ ಕಾರ್ಯಕ್ರಮ ನಡೆಯಿತು.
ಸುರೇಶ್ ಕುಂಬಾರ್ ಮತ್ತು ರೂಪಾ ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಪುಟಾಣಿಗಳು ಗೀತೆಯ 12 ಮತ್ತು 15ನೇ ಅಧ್ಯಾಯವನ್ನು ಪಠಿಸಿದರು. ಬೆಂಗಳೂರು ಗೀತಾ ಪರಿವಾರದ ಚಟುವಟಿಕೆಗಳನ್ನು ತಿಳಿಸುವ ‘ಸಂವಹನ’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಶ್ಲೋಕಾಂಕ ಮತ್ತು ಶೃಂಗೇರಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದವರನ್ನು ಅಭಿನಂದಿಸಲಾಯಿತು. ರಾಧಾ ರಮೇಶ್, ರಘುನಾಥ್, ಮೀನಲ್ ದಾನಿ, ಲಕ್ಷ್ಮೀ ಮಧುಸೂದನ, ಅನಸೂಯಾ ನಾಯಕ್, ರೂಪಶ್ರೀ, ಮಾನವಿ, ಸಪ್ನಾ ಜೀರೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ‘ಸಂವಹನ’ ಪತ್ರಿಕೆಯ ಸಂಪಾದಕರಾದ ಅರುಣ, ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.