'ಗಿರಿಯೆತ್ತರ' ಕೃತಿ ಬಿಡುಗಡೆ ಕಾರ್ಯಕ್ರಮ ಭಾನುವಾರ (ಜು.6) ಬೆಂಗಳೂರಿನ ಚುಂಚಘಟ್ಟ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಆವರಣದಲ್ಲಿ ನಡೆಯಿತು. ಶ್ರೀರಾಮ ಕಲಾ ಸಂಘದ ಅಧ್ಯಕ್ಷ ಎಂ.ಎಸ್.ಕೆ.ವಾಸಿಷ್ಠ, ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ ಕೆ.ಎಸ್.ಸಮೀರ ಸಿಂಹ ಹಾಗೂ ಉದ್ಯಮಿ, ರಾಮಮೋಹನ್, ಗಿರೀಶ್ ಅವರ ಪತ್ನಿ ಕೀರ್ತಿ ಗಿರೀಶ್ ಹಾಗೂ ಪುತ್ರ ಇದ್ದರು.
ಬೆಂಗಳೂರು: ಕಿರಿ ವಯಸ್ಸಿನಲ್ಲೇ ಅಗಲಿದ, ಜನಾನುರಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ಗಿರೀಶ್ ಪರಂಗೋಡು ಅವರ ಸಂಸ್ಮರಣೆ ಹಾಗೂ ಅವರ ನೆನಪಿನ 'ಗಿರಿಯೆತ್ತರ' ಕೃತಿ ಬಿಡುಗಡೆ ಕಾರ್ಯಕ್ರಮ ಭಾನುವಾರ (ಜು.6) ಬೆಂಗಳೂರು ಕೋಣನಕುಂಟೆ ಸಮೀಪದ ಚುಂಚಘಟ್ಟ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಶ್ರೀ ರಾಮ ಕಲಾ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗಿರೀಶ್ ಪರಂಗೋಡು ಅವರ ನೆನಪಿನಲ್ಲಿ ನೀಡುವ 'ಪರಂಗೋಡು ಪ್ರಶಸ್ತಿ'ಯನ್ನು ಹವ್ಯಾಸಿ ಭಾಗವತ ಉದಯ ಪ್ರಕಾಶ್ ಪಟ್ಟಾಜೆ ಅವರಿಗೆ ನೀಡಿ ಗೌರವಿಸಲಾಯಿತು.
ಶ್ರೀ ರಾಮ ಕಲಾಸಂಘದ ಅಧ್ಯಕ್ಷ ಎಂ.ಎಸ್.ಕೆ.ವಾಸಿಷ್ಠ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ ಕೆ.ಎಸ್.ಸಮೀರ ಸಿಂಹ ಹಾಗೂ ಉದ್ಯಮಿ, ರಾಮಮೋಹನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಶ್ರೀರಾಮ ಕಲಾಸಂಘದ ಕಲಾವಿದರಿಂದ 'ಕರ್ಣ ಭೇದನ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.