ADVERTISEMENT

ತ್ಯಾಜ್ಯಮುಕ್ತ ಕ್ಯಾಂಪಸ್‍ನತ್ತ ಜಿಕೆವಿಕೆ

ಕೃಷಿ ವಿವಿ-ಐಟಿಸಿ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಮೇ 2020, 18:43 IST
Last Updated 29 ಮೇ 2020, 18:43 IST
ಒಪ್ಪಂದದ ವೇಳೆ (ಎಡದಿಂದ) ಐಸಿಎಆರ್ ನೋಡಲ್ ಅಧಿಕಾರಿ ಕೆ.ಪಿ.ಚಿನ್ನಸ್ವಾಮಿ, ಕಾರ್ಯಕ್ರಮ ಸಂಘಟಕ ಸಂಗಾ, ಐಟಿಸಿ ವಿಭಾಗೀಯ ವ್ಯವಸ್ಥಾಪಕ ಪಂಚಾಸ್ ಹಾಗೂ ಎಸ್.ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದರು.
ಒಪ್ಪಂದದ ವೇಳೆ (ಎಡದಿಂದ) ಐಸಿಎಆರ್ ನೋಡಲ್ ಅಧಿಕಾರಿ ಕೆ.ಪಿ.ಚಿನ್ನಸ್ವಾಮಿ, ಕಾರ್ಯಕ್ರಮ ಸಂಘಟಕ ಸಂಗಾ, ಐಟಿಸಿ ವಿಭಾಗೀಯ ವ್ಯವಸ್ಥಾಪಕ ಪಂಚಾಸ್ ಹಾಗೂ ಎಸ್.ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದರು.   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಐಟಿಸಿ ನಡುವೆ ಒಪ್ಪಂದವಾಗಿದ್ದು, ಶೀಘ್ರವೇ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ತ್ಯಾಜ್ಯಮುಕ್ತ ಕ್ಯಾಂಪಸ್ ಆಗಲಿದೆ.

ವಿಶ್ವವಿದ್ಯಾನಿಲಯದ ವಿವಿಧ ಕಚೇರಿಗಳು ಹಾಗೂ ವಿಭಾಗಗಳಲ್ಲಿರುವ ಹಳೆಯ ಕಾಗದಗಳು, ಪುಸ್ತಕಗಳು, ದಿನ ಪತ್ರಿಕೆಗಳು, ಪ್ಲಾಸ್ಟಿಕ್, ಇ-ತ್ಯಾಜ್ಯ ಮುಂತಾದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗುವುದು. ತಿಂಗಳಿಗೊಮ್ಮೆ ಇದನ್ನು ಐಟಿಸಿ ಸಂಸ್ಥೆ ಕೊಂಡೊಯ್ದು, ಹೊಸ ಕಾಗದ, ಫೈಲ್‍ಗಳು ಹಾಗೂ ಇನ್ನಿತರ ಬಳಕೆಯಾಗುವ ವಸ್ತುಗಳನ್ನು ಬದಲಿಯಾಗಿ ನೀಡಲಿದೆ.

ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಎಸ್.ರಾಜೇಂದ್ರ ಪ್ರಸಾದ್,'ಒಂದು ಟನ್ ಹಳೆ ಕಾಗದ ಪುನರ್ಬಳಕೆಯಿಂದ ಶೇ 70ರಷ್ಟು ಕಚ್ಚಾವಸ್ತು, ಶೇ 60ರಷ್ಟು ಕಲ್ಲಿದ್ದಲು ಹಾಗೂ ಶೇ 43ರಷ್ಟು ಶಕ್ತಿ ಉಳಿತಾಯವಾಗುತ್ತದೆ. ಕಾಗದವನ್ನು 5ರಿಂದ 7 ಬಾರಿ ಮರುಬಳಕೆ ಮಾಡಬಹುದು. ಒಂದು ಟನ್ ಮರುಬಳಕೆ ಕಾಗದ 17 ಮರಗಳ ಜೀವ ಉಳಿಸುತ್ತದೆ. ಇದರಿಂದ 250 ಪೌಂಡ್ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತದೆ‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.