ADVERTISEMENT

ಜಾಗತಿಕ ಜಲ ಪ್ರಶಸ್ತಿಗೆ ಜೈನ್‌ ವಿವಿಯ ಪ್ರೊ. ಆರ್‌. ಗೀತಾ ಬಾಲಕೃಷ್ಣ ಭಾಜನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 22:43 IST
Last Updated 24 ಜನವರಿ 2023, 22:43 IST
ಆರ್.ಗೀತಾ ಬಾಲಕೃಷ್ಣ
ಆರ್.ಗೀತಾ ಬಾಲಕೃಷ್ಣ   

ಬೆಂಗಳೂರು: ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಉತ್ಪಾದನೆ ಮಾಡುವ ಸಂಶೋಧನೆಗಳಿಗೆ ಮೀಸಲಾದ, ‘ಮೊಹಮದ್‌ ಬಿನ್ ರಷೀದ್‌ ಅಲ್‌ ಮುಖ್ತಮ್‌ ಜಾಗತಿಕ ಜಲ ಪ್ರಶಸ್ತಿ’ಯು ನಗರದ ಜೈನ್‌ ವಿಶ್ವವಿದ್ಯಾಲಯದ ಪ್ರೊ. ಆರ್‌. ಗೀತಾ ಬಾಲಕೃಷ್ಣ ಅವರಿಗೆ ಲಭಿಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನವೀನ ಮಾದರಿಯ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ರೂಪಿಸುವ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ವೈಯಕ್ತಿಕವಾಗಿ ಕೈಗೊಳ್ಳಲಾಗುವ ಸಂಶೋಧನೆಗಳ ಪ್ರೋತ್ಸಾಹಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

‘ಹೈದರಾಬಾದ್‌ನ ಮೈತ್ರಿ ಅಕ್ವಾ ಟೆಕ್‌ ಕಂಪನಿಯ ಸಹಭಾಗಿತ್ವದಲ್ಲಿ ಗೀತಾ ಬಾಲಕೃಷ್ಣ ಈ ಸಂಶೋಧನೆ ಕೈಗೊಂಡಿದ್ದು, ₹ 40 ಲಕ್ಷ ಮೊತ್ತದ ಈ ಪ್ರಶಸ್ತಿಗೆ ಕಂಪನಿ ಮತ್ತು ಗೀತಾ ಬಾಲಕೃಷ್ಣ ಭಾಜನರಾಗಿದ್ದಾರೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಇತ್ತೀಚೆಗೆ ದುಬೈನಲ್ಲಿ ನಡೆದ ಸಮಾರಂಭದಲ್ಲಿ ಯುಎಇ ಪ್ರಧಾನಿ ಶೇಕ್‌ ಮೊಹಮದ್‌ ಬಿನ್‌ ರಷೀದ್‌ ಅಲ್ ಮುಖ್ತಮ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.