ADVERTISEMENT

ಬಿಪಿಎಲ್‌ ಕುಟುಂಬದ ವಧುವಿಗೆ ಮಲಬಾರ್‌ನಿಂದ ಚಿನ್ನಾಭರಣ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:55 IST
Last Updated 28 ಜೂನ್ 2019, 19:55 IST
   

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಧುಗಳಿಗೆ ವಿಶೇಷ ವಿನ್ಯಾಸದ ಆಭರಣಗಳನ್ನು ಉಚಿತವಾಗಿ ನೀಡಲು ಮಲಬಾರ್‌ ಚಿನ್ನ ಮತ್ತು ವಜ್ರಾಭರಣ ಕಂಪನಿ ಮುಂದಾಗಿದೆ.

ಕೇರಳದಲ್ಲಿ ಮೊದಲು ಈ ಯೋಜನೆ ಅನುಷ್ಠಾನಗೊಳಿಸಿದ್ದು, 30ಕ್ಕೂ ಹೆಚ್ಚು ವಧುಗಳಿಗೆ 600 ಗ್ರಾಂಗಳಿಗೂ ಅಧಿಕ ತೂಕದ ಒಡವೆಗಳನ್ನು ವಿತರಿಸಲಾಗಿದೆ. ಗರಿಷ್ಠ 24 ಗ್ರಾಂನ ಚಿನ್ನಾಭರಣಗಳನ್ನು ವಧುವಿಗೆ ನೀಡಲಾಗುತ್ತದೆ. ದೇಶದಾದ್ಯಂತ ಶೀಘ್ರವೇ ಈ ಯೋಜನೆ ವಿಸ್ತರಿಸಲು ಕಂಪನಿ ಯೋಚಿಸಿದೆ.

ಈ ಸೌಲಭ್ಯ ಪಡೆಯುವ ಕುಟುಂಬದ ವಧುಗಳು ಬಿಪಿಎಲ್‌ ಪಡಿತರ ಚೀಟಿ ಹೊಂದಿರಬೇಕು, ಸಹೋದರರು ಇರಬಾರದು. ವಧುವಿಗೆ 20 ವರ್ಷಗಳಾಗಿರಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ. ಕಂಪನಿ ರಚಿಸುವ ಸಮಿತಿ ನೀಡುವ ವರದಿ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.