ಬೆಂಗಳೂರು: ಮೈಕೊ ಲೇಔಟ್‌ನ ರಂಕಾ ಕಾಲೊನಿಯಲ್ಲಿ ಡೆಲಿವರಿ ಯುವಕನ ದ್ವಿಚಕ್ರ ವಾಹನದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿ ಆಗಿದ್ದಾರೆ.
ಮೈಕೊ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಎಎನ್‌ಎನ್‌ರಾಜ್ ಅಪಾರ್ಟ್‌ಮೆಂಟ್ ಬಳಿ ಗ್ರಾಹಕರಿಗೆ ಡೆಲಿವರಿ ಮಾಡಲು ತನ್ನ ಸ್ಕೂಟರ್‌ನಲ್ಲಿ ವಿವಿಧ ಉಪಕರಣಗಳನ್ನು ತಂದಿದ್ದರು. ಸ್ಕೂಟರ್ ನಿಲ್ಲಿಸಿ ವಸ್ತುಗಳನ್ನು ಡೆಲಿವರಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಕಳವು ಮಾಡಿಕೊಂಡು ಪರಾರಿ ಆಗಿದ್ದಾರೆ.
ಇಬ್ಬರು ಕಳ್ಳರು ಹಿಂಬಾಲಿಸಿಕೊಂಡು ಬಂದಿದ್ದು ಡೆಲಿವರಿ ಯುವಕನ ಗಮನಕ್ಕೆ ಬಂದಿರಲಿಲ್ಲ. ಉಪಕರಣಗಳನ್ನು ಗ್ರಾಹಕರಿಗೆ ನೀಡಿ ವಾಪಸ್ ಬಂದು ನೋಡಿದಾಗ ಬ್ಯಾಗ್‌ನಲ್ಲಿದ್ದ ಸಾಮಗ್ರಿಗಳು ಇರಲಿಲ್ಲ. ತಕ್ಷಣ ಅವರು ಮೈಕೊ ಲೇಔಟ್ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಕೃತ್ಯ ಎಸಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.