ADVERTISEMENT

ಸರ್ಕಾರಿ ಜಮೀನು ಒತ್ತುವರಿ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 21:00 IST
Last Updated 19 ಮಾರ್ಚ್ 2023, 21:00 IST

ಬೆಂಗಳೂರು: ನಗರದ ಬೆಂಗಳೂರು ಪೂರ್ವ (ಕೆ.ಆರ್‌.ಪುರ) ತಾಲ್ಲೂಕಿನ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 20ರಲ್ಲಿರುವ ಸರ್ಕಾರಿ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಕೊಂಡು ವಸತಿ ಬಡಾವಣೆ ನಿರ್ಮಿಸು ತ್ತಿದ್ದಾರೆ ಎಂಬ ದೂರಿನ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪಾಲರ ಸಚಿವಾಲಯವು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ಮಾರ್ಚ್‌ 13ರಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ದೂರು ಸಲ್ಲಿಸಿದ್ದ ಮುನ್ನೇಕೊಳಾಲ ನಿವಾಸಿ ಎಸ್‌. ರಾಜಮಣಿ, ಚಿನ್ನಪ್ಪನ ಹಳ್ಳಿ ನಿವಾಸಿ ವಿ.ಎನ್‌. ರಾಜಾರಾಂ ಮತ್ತು ಇತರರು, ’ಚಿನ್ನಪ್ಪನಹಳ್ಳಿಯ ಸರ್ವೆ ನಂಬರ್‌ 20ರಲ್ಲಿರುವ ಸರ್ಕಾರಿ ಜಮೀನನ್ನು ಕಬಳಿಸಿ ಬಡಾವಣೆ
ನಿರ್ಮಿಸಲಾಗುತ್ತಿದೆ. ಹಲವು ವರ್ಷ ಗಳಿಂದ ನಿರಂತರವಾಗಿ ದೂರು ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿ ಗಳು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದರು.

‘ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 20ರಲ್ಲಿ ಒಟ್ಟು 19 ಎಕರೆ 19 ಗುಂಟೆ ಜಮೀನು ಇದೆ. ಅದರಲ್ಲಿ 10 ಎಕರೆ 20 ಗುಂಟೆ ‘ಎ’ ಖರಾಬು ಮತ್ತು 3 ಎಕರೆ 27 ಗುಂಟೆ ‘ಬಿ’ ಖರಾಬು ಜಮೀನು ಇದೆ. ಕೆಲವು
ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಜಮೀನನ್ನೂ ಸೇರಿಸಿ ಖಾಸಗಿ ಕಂಪನಿಯೊಂದಕ್ಕೆ ಜಂಟಿ ಅಭಿವೃದ್ಧಿ ಕರಾರು ಮಾಡಿಕೊಟ್ಟಿ ದ್ದಾರೆ. ಆ ಕಂಪನಿಯವರು ಸರ್ಕಾರಿ ಜಮೀನಿಗೆ ಕಾಂ‍ಪೌಂಡ್‌ ನಿರ್ಮಿಸಿ ಬಡಾವಣೆ
ಅಭಿವೃದ್ಧಿಪಡಿಸುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಮಾರಾಟ ಮಾಡುವ ಪ್ರಯತ್ನ ನಡೆದಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ADVERTISEMENT

ಸರ್ಕಾರಿ ಜಮೀನು ಕಬಳಿಸುವ ಪ್ರಯತ್ನದ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಆಗಿಲ್ಲ. ತಕ್ಷಣವೇ ಈ ಕುರಿತು ಕ್ರಮ ಜರುಗಿಸಬೇಕು ಮತ್ತು ಭೂ ಕಬಳಿಕೆ ಯಲ್ಲಿ ನಿರತರಾಗಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರುದಾರರು ರಾಜ್ಯಪಾಲರನ್ನು ಆಗ್ರಹಿಸಿದ್ದರು.

ಕ್ರಮಕ್ಕೆ ಪತ್ರ: ದೂರು ಹಾಗೂ ಅದ ರೊಂದಿಗೆ ಸಲ್ಲಿಸಿದ್ದ ದಾಖಲೆಗಳ ಪ್ರತಿ ಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿರುವ ರಾಜ್ಯಪಾಲರ ಸಚಿವಾಲಯ, ದೂರಿನಲ್ಲಿರುವ ಆರೋಪಗಳನ್ನು ಪರಿಶೀಲಿಸಿ, ಕಾನೂನು ಪ್ರಕಾರ ಸೂಕ್ತಕ್ರಮ ಜರುಗಿಸುವಂತೆ ಮಾರ್ಚ್‌ 13ರಂದು ಪತ್ರ ಬರೆದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ‘ಚಿನ್ನಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಕೆ ಪ್ರಯತ್ನ ನಡೆದಿರುವ ಕುರಿತು ರಾಜ್ಯಪಾಲರಿಗೆ ಸಲ್ಲಿಸಿರುವ ದೂರು ಹಾಗೂ ರಾಜ್ಯ ಪಾಲರ ಸಚಿವಾಲಯದ ಪತ್ರವನ್ನು ಪರಿ ಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.