ADVERTISEMENT

ಗ್ರೀನ್‌ ಕಾರಿಡಾರ್‌ ಮೂಲಕ ಹೃದಯ ಸಾಗಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 19:58 IST
Last Updated 25 ಜೂನ್ 2018, 19:58 IST
ಹೃದಯ
ಹೃದಯ   

ಬೆಂಗಳೂರು: ನಗರದ ಸ್ಪರ್ಶ ಆಸ್ಪತ್ರೆಯ ವೈದ್ಯರು ಗ್ರೀನ್‌ ಕಾರಿಡಾರ್‌ ಮೂಲಕ 21 ವರ್ಷದ ಯುವಕನ ಹೃದಯವನ್ನು ಸಾಗಿಸಿದ್ದಾರೆ.

ಹೈದರಾಬಾದ್‌ ಹಾಗೂ ರಾಯಚೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಎಚ್‌.ತಮ್ಮಯ್ಯ ತೀವ್ರವಾಗಿ ಗಾಯಗೊಂಡಿದ್ದರು. ಜೂನ್‌ 19ರಂದು ಅವರ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.

ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 52 ವರ್ಷದ ಮಹಿಳೆಗೆ ದಾನಿಯ ಹೃದಯ ಹೊಂದಾಣಿಕೆಯಾಗುವ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇರೆಗೆ ಬೆಳಗಿನ ಜಾವ ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ವೈಟ್‌ಫೀಲ್ಡ್‌ವರೆಗೆ ಪೊಲೀಸರ ನೆರವಿನಿಂದ ಗ್ರೀನ್‌ ಕಾರಿಡಾರ್‌ ಮೂಲಕ ಸಿಗ್ನಲ್ ರಹಿತಗೊಳಿಸಿ ಹೃದಯವನ್ನು ಸಾಗಿಸಲಾಯಿತು. ಮೂತ್ರಕೋಶವನ್ನು ಸ್ಪರ್ಶ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದ ರೋಗಿಗೆ ಹಾಗೂ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಯಿತು. ಈ ತಂಡದಲ್ಲಿ ಡಾ. ಮ್ಯಾಥ್ಯೂ ಜೇಕಬ್, ಡಾ.ರೆಹಾನ್, ಡಾ. ಟಿ.ಎಸ್‌.ಅವಿನಾಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.