ADVERTISEMENT

ಬಡ ಕುಟುಂಬಗಳಿಗೆ ದಿನಸಿ ವಿತರಣೆ

ಎಂ.ಕೆ.ಆಗ್ರೊಟೆಕ್ ಸಂಸ್ಥೆಯಿಂದ ನೆರವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:01 IST
Last Updated 22 ಏಪ್ರಿಲ್ 2020, 20:01 IST
   

ಬೆಂಗಳೂರು: ಎಂ.ಕೆ.ಆಗ್ರೊಟೆಕ್ ಸಂಸ್ಥೆಯ ಸನ್‍ಪ್ಯೂರ್ ಹಾಗೂ ಮಸೂಮ್ ಟ್ರಸ್ಟ್ ಸಹಯೋಗದಲ್ಲಿ ಕೊರೊನಾ ಹಸಿವಿನ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಒಳಗೊಂಡ ಆಹಾರದ ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿವೆ.

ಕಿಟ್‍ನಲ್ಲಿ 5 ಕೆ.ಜಿ ಸೋನಾಮಸೂರಿ ಅಕ್ಕಿ, 2 ಲೀಟರ್ ಸನ್‍ಪ್ಯೂರ್ ಸೂರ್ಯಕಾಂತಿ ಎಣ್ಣೆ, ಗೋಧಿ ಹಿಟ್ಟು, ಬೇಳೆ, ಸಕ್ಕರೆ, ಉಪ್ಪು, ಅರಿಶಿನ ಮತ್ತು ಖಾರದ ಪುಡಿ ಹಾಗೂ ಸಾಬೂನು ಒಳಗೊಂಡಿರುತ್ತವೆ.

ಮಸೂಮ್ ಟ್ರಸ್ಟ್‌ನೊಂದಿಗೆ ರಾಜ್ಯದ ವಿವಿಧೆಡೆ ಏಳು ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದೆ. ಸದ್ಯ ಐದು ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಆಹಾರ ಸಮಸ್ಯೆ ಎದುರಿಸುತ್ತಿದ್ದು, ಇವರಿಗೆ ದಿನಸಿ ಪದಾರ್ಥಗಳ ವಿತರಣೆಗೆ ಸಾರ್ವಜನಿಕರು ದೇಣಿಗೆ ನೀಡಬಹುದು ಎಂದು ಮನವಿ ಮಾಡಿದೆ.

ADVERTISEMENT

ಖಾತೆ ಹೆಸರು: ಮಸೂಮ್ ಟ್ರಸ್ಟ್,ಸಂಖ್ಯೆ: 35782515726, ಬ್ಯಾಂಕ್‌ ಹೆಸರು:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಐಎಫ್‍ಎಸ್‍ಸಿ ಕೋಡ್: SBIN0004161 ಸಂಪರ್ಕ: 9740766668 ಅಥವಾ ಇ-ಮೇಲ್:jeelani@masoom.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.