ADVERTISEMENT

ಜಿಎಸ್‌ಟಿ ಸಂಖ್ಯೆ ದುರುಪಯೋಗ: ₹ 120 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 17:32 IST
Last Updated 26 ಆಗಸ್ಟ್ 2023, 17:32 IST
ಜಿಎಸ್‌ಟಿ
ಜಿಎಸ್‌ಟಿ    ಐಸ್ಟಾಕ್ ಚಿತ್ರ

ಬೆಂಗಳೂರು: ‘ನನ್ನ ಜಿಎಸ್‌ಟಿ ಸಂಖ್ಯೆ ದುರುಪಯೋಗ ಮಾಡಿಕೊಂಡಿರುವ ಅಪರಿಚಿತನೊಬ್ಬ ₹120 ಕೋಟಿ ವಹಿವಾಟು ತೋರಿಸಿದ್ದಾನೆ’ ಎಂದು ವ್ಯಾ‍ಪಾರಿ ರಾಜೇಶ್, ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಪ್ರಿಂಟಿಂಗ್ ಉಪಕರಣ ದುರಸ್ತಿ ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ಜೆಬಿಪಿ ಎಂಟರ್‌ಪ್ರೈಸಸ್ ಎಂಬ ಕಂಪನಿ ತೆರೆದಿದ್ದೆ. ಜಿಎಸ್‌ಟಿ ಸಂಖ್ಯೆಯನ್ನೂ ಪಡೆದುಕೊಂಡಿದ್ದೆ. ಜಿಎಸ್‌ಟಿಗೆ ಕಡಿತವಾದ ಮೊತ್ತವನ್ನು ವಾಪಸು ಪಡೆಯುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ, ಗೂಗಲ್ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದೆ. ವ್ಯಕ್ತಿಯೊಬ್ಬರ ನಂಬರ್ ತಿಳಿದುಕೊಂದು, ಮಾತನಾಡಿದ್ದೆ’ ಎಂದು ವ್ಯಾಪಾರಿ ದೂರಿನಲ್ಲಿ ತಿಳಿಸಿದ್ದಾರೆ.

‘ಹಣ ಮರುಪಾವತಿಗೆ ಸಹಾಯ ಮಾಡುವುದಾಗಿ ಹೇಳಿದ್ದ ವ್ಯಕ್ತಿ, ಜಿಎಸ್‌ಟಿ ಸಂಖ್ಯೆ ಹಾಗೂ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದ. ಇದಾದ ನಂತರ, ಯಾವುದೇ ಹಣ ಬಂದಿರಲಿಲ್ಲ. ಆದರೆ, ನನ್ನ ಜಿಎಸ್‌ಟಿ ಸಂಖ್ಯೆಯಿಂದ ಮೂರು ತಿಂಗಳ ಅವಧಿಯಲ್ಲಿ ₹120 ಕೋಟಿ ವಹಿವಾಟು ನಡೆದಿರುವುದು ಇತ್ತೀಚೆಗೆ ಗೊತ್ತಾಗಿದೆ. ನಂತರ, ಜಿಎಸ್‌ಟಿ ಸಂಖ್ಯೆ ರದ್ದುಪಡಿಸಿದ್ದೇನೆ’ ಎಂದು ವ್ಯಾಪಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಜಿಎಸ್‌ಟಿ ಸಂಖ್ಯೆ ಪಡೆದು ವಂಚನೆ ಮಾಡಿರುವ ಆರೋಪದಡಿ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.