ADVERTISEMENT

ಲೈಂಗಿಕ ಕಿರುಕುಳ; ಆರೋಪಿ ಶರಣಪ್ಪ ಅಮಾನತು

ನ್ಯಾಯಾಂಗ ಬಂಧನಕ್ಕೆ ಗ್ರಂಥಾಲಯ ಅಧೀಕ್ಷಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:00 IST
Last Updated 7 ಏಪ್ರಿಲ್ 2021, 16:00 IST
ಶರಣಪ್ಪ ಮಾಕುಂಡಿ
ಶರಣಪ್ಪ ಮಾಕುಂಡಿ   

ಕಲಬುರ್ಗಿ: ತನ್ನ ಅಧೀನ ಸಿಬ್ಬಂದಿಯ ಕೆಲಸವನ್ನು ಕಾಯಂಗೊಳಿಸುವುದಾಗಿ ಆಮಿಷ ತೋರಿಸಿ ಆ ಮಹಿಳೆಯ ಬೆತ್ತಲೆ ವಿಡಿಯೊವನ್ನು ಮೊಬೈಲ್‌ನಲ್ಲಿ ತರಿಸಿಕೊಂಡು ವಿವಿಧ ವಾಟ್ಸ್ಆ್ಯಪ್‌ ಗ್ರೂಪ್‌ಗಳಿಗೆ ಹಂಚಿಕೊಂಡು ದುರ್ನಡತೆ ತೋರಿದ ಆರೋಪದ ಮೇರೆಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಶರಣಪ್ಪ ಅವರನ್ನು ಬಂಧಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ, ‘ಆರೋಪಿ ಶರಣಪ್ಪ ಕಳೆದ 10 ದಿನಗಳಿಂದ ಸತತವಾಗಿ ಯಾವುದೇ ಮಾಹಿತಿ ನೀಡದೇ ಸೇವೆಗೆ ಗೈರು ಹಾಜರಾಗಿದ್ದರು. ಈ ಬಗ್ಗೆ ಗ್ರಂಥಪಾಲಕರು ನನಗೆ ವರದಿ ಕಳಿಸಿದ್ದರು. ಅಲ್ಲದೇ, ಮಹಿಳೆಯ ವಿಡಿಯೊವನ್ನು ವೈರಲ್ ಮಾಡುವ ಮೂಲಕ ವಿ.ವಿ. ಘನತೆಗೆ ಚ್ಯುತಿ ತಂದಿದ್ದಾರೆ. ಇದನ್ನು ವಿಶ್ವವಿದ್ಯಾಲಯದ ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ನಿಯಮ 10ರ ಪ್ರಕಾರ ದುರ್ನಡತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ವಿಚಾರಣೆಯನ್ನು ಕಾಯ್ದಿರಿಸಿ ಹಾಗೂ ಸಿಂಡಿಕೇಟ್ ಅನುಮೋದನೆಯನ್ನು ನಿರೀಕ್ಷಿಸಿ ಸೇವೆಯಿಂದ ಅಮಾನತುಗೊಳಿಸಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.