ADVERTISEMENT

ಬೆಂಗಳೂರು: ಇಂದಿನಿಂದ ಕೈಮಗ್ಗ, ಕರಕುಶಲ ಉತ್ಪನ್ನಗಳ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 20:47 IST
Last Updated 18 ಸೆಪ್ಟೆಂಬರ್ 2025, 20:47 IST
ಕೈಮಗ್ಗದಲ್ಲಿ ವಸ್ತ್ರದ ನೇಯ್ಗೆ(ಸಾಂದರ್ಭಿಕ ಚಿತ್ರ)
ಕೈಮಗ್ಗದಲ್ಲಿ ವಸ್ತ್ರದ ನೇಯ್ಗೆ(ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕೋರಮಂಗಲದ ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ(ಬಿಐಸಿ) ಇದೇ 19ರಿಂದ 21ರವರೆಗೆ ‘ನೈಸರ್ಗಿಕ ಬಣ್ಣ ಮತ್ತು ಕೈ ಮಗ್ಗ ಹಾಗೂ ಕರಕುಶಲ ವಸ್ತುಗಳ ವಿಶೇಷ ಉತ್ಸವ’ವನ್ನು ಆಯೋಜಿಸಲಾಗಿದೆ.

ಇಂಡಿಯಾ ಹ್ಯಾಂಡ್‌ಮೇಡ್‌ ಕಲೆಕ್ಟಿವ್‌ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ ‌ಈ ಉತ್ಸವದಲ್ಲಿ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ವೈವಿಧ್ಯಮಯ ಬಟ್ಟೆಗಳು, ಉಡುಪುಗಳು, ಟವೆಲ್ ಮತ್ತು ಇತರ ಗೃಹಾಲಂಕಾರಿಕ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಇದಲ್ಲದೆ ಸಹಜ ಮತ್ತು ನೈಸರ್ಗಿಕ ಆಲಂಕಾರಿಕ ವಸ್ತುಗಳ ಪ್ರದರ್ಶನ ಮಳಿಗೆಗಳೂ ಇರುತ್ತವೆ.

ಉತ್ಪನ್ನಗಳ ಪ್ರದರ್ಶನ-ಮಾರಾಟದ ಜೊತೆಗೆ, ಕಸೂತಿ, ಹ್ಯಾಂಡ್ ಪ್ರಿಂಟಿಂಗ್ ಸೇರಿದಂತೆ ಹಲವು ಕುಶಲ ಕೆಲಸಗಳ ಕಾರ್ಯಾಗಾರ ಆಯೋಜಿಸಲಾಗಿದೆ.

ADVERTISEMENT

ಮಾಹಿತಿಗೆ 7305127412 ಸಂಪರ್ಕಿಸಬಹುದು, www.indiahandmadecollective.com ಜಾಲತಾಣಕ್ಕೂ ಭೇಟಿ ನೀಡಬಹುದು.

ಕೈಮಗ್ಗ ವಸ್ತ್ರ(ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.