ADVERTISEMENT

’ನನಗೂ ಸಿದ್ದರಾಮಯ್ಯಗೂ ಪುಸ್ತಕ ಕೊಟ್ಟು ಓದಿಸಿದ್ದರು ಸ್ವಾಮೀಜಿ’: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 8:48 IST
Last Updated 31 ಜನವರಿ 2019, 8:48 IST
   

ತುಮಕೂರು:‘ಹಿಂದೂ ಧರ್ಮದ ಬಗ್ಗೆ ರಾಧಾಕೃಷ್ಣನ್‌ ಅವರು ಬರೆದ ಪುಸ್ತಕ ಓದಿಸಿ, ಅದರ ಸಾರವನ್ನು ತಿಳಿಸಿದಗುರುಗಳು ಶಿವಕುಮಾರ ಸ್ವಾಮೀಜಿ’ ಎಂದುಉಪಮುಖ್ಯಮಂತ್ರಿ ಪರಮೇಶ್ವರ ನೆನಪಿಸಿಕೊಂಡರು.

ಸಿದ್ಧಗಂಗಾಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಾನು ಮತ್ತು ಸಿದ್ದರಾಮಯ್ಯಸ್ವಾಮೀಜಿ ಅವರನ್ನುಭೇಟಿ ಮಾಡಿದ್ದೆವು. ಆಗ ನನಗೆ ಅವರು ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಪುಸ್ತಕ ಕೊಟ್ಟು, ಅದರಲ್ಲಿ ಹಿಂದೂ ಧರ್ಮದ ಕುರಿತು ಇದ್ದಪ್ಯಾರಾವನ್ನು ಓದಿಸಿದರು. ಸಿದ್ದರಾಮಯ್ಯ ಅವರಿಂದಲೂ ಅದನ್ನು ಓದಿಸಿದರು.ನಂತರ ಅವರೇ ಓದಿದರು’ ಎಂದು ಸ್ವಾಮೀಜಿಯೊಂದಿಗಿನ ಒಡನಾಡವನ್ನು ಸ್ಮರಿಸಿಕೊಂಡರು.

‘ವಿಶ್ವಕ್ಕೆ ಗೊತ್ತು ಸಿದ್ದಗಂಗಾ ಮಠದಲ್ಲಿ 10 ಸಾವಿರ ಬಡ ಮಕ್ಕಳಿಗೆ ನಿತ್ಯ ಅನ್ನದಾಸೋದ‌ ಜತೆ ವಿದ್ಯಾ ದಾಸೋಹ ಆಗುತ್ತಿದೆ ಎಂದು.ಶಿಕ್ಷಣ ಮನುಷ್ಯನ ಬದಲಾವಣೆ ಮಾಡುತ್ತದೆ ಜೀವನ ಕೊಡುತ್ತದೆ ಎನ್ನುವುದನ್ನು ಸ್ವಾಮೀಜಿ ಪದೇ ಪದೇ ಹೇಳುತ್ತಿದ್ದರು’ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಭಾಗವಾಗಿ ನಾನೂ ಇದ್ದೇನೆ. ಮುಖ್ಯಮಂತ್ರಿಗಳು ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಸ್ವಾಮೀಜಿ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಬೇಕು’ಎಂದು ಮುಖ್ಯಮಂತ್ರಿ ಅವರಿಗೆವೇದಿಕೆಯಲ್ಲಿಯೇ ಹೇಳಿದರು.

ನಾವೆಲ್ಲ ಒಂದಾಗಿದ್ದೇವೆ

ಏಕಾಂತ ಮತ್ತು ಲೋಕಾಂತ ಸಮನ್ವಯ ರೀತಿ ಅಭೂತಪೂರ್ವವಾಗಿ ಬದುಕಿದವರು ಶಿವಕುಮಾರ ಸ್ವಾಮೀಜಿ. ಅವರು ಕಂಡ ಕನಸಿನಂತೆ ನಾವೆಲ್ಲ ಈಗ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ’ ಎಂದು ಶ್ರೀಶೈಲ ಚನ್ನಸಿದ್ಧರಾಮ ಶಿವಾಚಾರ್ಯರು ಹೇಳಿದರು.

ಗೊ.ರು.ಚನ್ನಬಸಪ್ಪ ಮಾತನಾಡಿ, 'ಮಹಾವೃಕ್ಷ ನೀಡಿದ ರುಚಿಕರ ಹಣ್ಣು ಶಿವಕುಮಾರ ಸ್ವಾಮೀಜಿ. ಆ ಹಣ್ಣು ತನಗೆ ಇರಲಿ ಎಂದು ಪರಶಿವ ಅದನ್ನು ವಾಪಸ್‌ ಪಡೆದ.ಮಾನಸಿಕ ಸಿದ್ಧತೆ, ಆಧ್ಯಾತ್ಮ ಸಾಧನೆ, ಶ್ರದ್ಧಾಭಕ್ತಿ, ಆಳವಾದ ಅಧ್ಯಯನದಿಂದ ಶಿವಕುಮಾರ ಸ್ವಾಮೀಜಿ ಮಹೋನ್ನತ ಸಾಧನೆ ಮಾಡಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.