ADVERTISEMENT

ಶೇ 66 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇನ್ಸುಲಿನ್

ಆಸ್ಪತ್ರೆ, ಔಷಧ ಮಳಿಗೆಗಳಿಂದ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:52 IST
Last Updated 19 ಅಕ್ಟೋಬರ್ 2019, 18:52 IST
.
.   

ಬೆಂಗಳೂರು: ನಗರದ ಶೇ 66 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇನ್ಸುಲಿನ್ ಔಷಧಿ ಲಭ್ಯವಿದೆ ಎನ್ನುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಶೇ 80 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಔಷಧಿ ಲಭ್ಯವಿರಬೇಕೆಂದು ಸೂಚಿಸಿದೆ. ಈ ಬಗ್ಗೆಕೇರಳದ ಕೋಯಿಕ್ಕೋಡ್‍ನ ನ್ಯಾಷನಲ್ ಫಾರ್ಮಸಿ ಕಾಲೇಜು ಹಾಗೂ ಅಮೆರಿಕದ ಬಾಸ್ಟನ್ ಯುನಿವರ್ಸಿಸಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ಸಂಶೋಧಕರು ನಗರದಲ್ಲಿ ನಡೆಸಿದ ಸಂಶೋಧನೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಔಷಧ ಇಲ್ಲದಿರುವ ಅಂಶ ಪತ್ತೆಯಾಗಿದೆ.

ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ ಗೌತಮ್ ಸತೀಶ್, ಪ್ರಾಂಶುಪಾಲ ಪ್ರೊ.ಎಂ.ಕೆ.ಉನ್ನಿಕೃಷ್ಣನ್ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಅಭಿಷೇಕ್ ಶರ್ಮಾ ಸಂಶೋಧನೆ ನಡೆಸಿದ್ದರು.

ADVERTISEMENT

ದೇಶದ ಮಾರುಕಟ್ಟೆಯಲ್ಲಿ ಸಿಗುವ ಶೇ.80 ರಷ್ಟು ಇನ್ಸುಲಿನ್ ಔಷಧಿಯನ್ನು ಭಾರತೀಯ ಕಂಪನಿಗಳೇ ತಯಾರಿಸುತ್ತಿವೆ. ಆದರೆ ಇವುಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವವರಲ್ಲಿ ವಿದೇಶಿ ಕಂಪನಿಗಳೇ ಜಾಸ್ತಿ.

ತಲಾ 5 ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ, 30 ಔಷಧಿ ಮಳಿಗೆ ಹಾಗೂ ಜನೌಷಧ ಮಳಿಗೆಗಳಲ್ಲಿ ಮಾಹಿತಿ ಸಂಗ್ರಹಿಸಿ ಸಂಶೋಧನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.