ADVERTISEMENT

ದಂಪತಿ ಬಾಳಲ್ಲಿ ಬೆಳಕು ತಂದ ಪಿ.ಜಿ.ಡಿ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:39 IST
Last Updated 16 ಅಕ್ಟೋಬರ್ 2019, 19:39 IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂಪತಿ ಜತೆ ಡಾ. ದೇವಿಕಾ ಗುಣಶೀಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂಪತಿ ಜತೆ ಡಾ. ದೇವಿಕಾ ಗುಣಶೀಲ   

ಬೆಂಗಳೂರು: ವಂಶವಾಹಿನಿಯಲ್ಲಿ ದೋಷ ಹೊಂದಿದ್ದ ದಂಪತಿಗೆ ಆರೋಗ್ಯವಂತ ಮಗು ಜನಿಸುವಂತೆ ಮಾಡುವಲ್ಲಿ ನಗರದ ಗುಣಶೀಲ ಸರ್ಜಿಕಲ್ ಆ್ಯಂಡ್‌ ಮೆಟರ್ನಿಟಿ ಆಸ್ಪತ್ರೆಯು ಯಶಸ್ವಿಯಾಗಿದೆ.

ಸಿಕಲ್ ಸೆಲ್ ಕಾಯಿಲೆ ಹೊಂದಿದ್ದ ಈ ದಂಪತಿಯ ಎಚ್‍ಬಿಬಿ ವಂಶವಾಹಿನಿಯನ್ನು ಬದಲಿಸದೆ ಇವರ ಹೆಣ್ಣುಮಗುವಿಗೆ ಈ ಕಾಯಿಲೆ ವರ್ಗಾವಣೆಯಾಗದಂತೆ ನೋಡಿಕೊಳ್ಳಲಾಗಿದೆ.

ಡಾ. ವಾಣಿಶ್ರೀ (35 ವರ್ಷ) ಅವರು ಅಲೋಕ್ ಕಾಳೆಯವರನ್ನು ವಿವಾಹವಾಗಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಇಬ್ಬರೂ ತಮ್ಮ ವಂಶವಾಹಿನಿಯಲ್ಲಿ ಸಿಕಲ್ ಸೆಲ್ ವಂಶವಾಹಿನಿಯ ಸಮಸ್ಯೆ ಹೊಂದಿರುವುದರಿಂದ ಅವರಿಗೆ ಮಗು ಪಡೆಯುವುದು ಸಾಧ್ಯವಾಗಿರಲಿಲ್ಲ. ತಮ್ಮ ಮಗು ಕೂಡ ಸಿಕಲ್ ಸೆಲ್ ರೋಗದೊಂದಿಗೆ ಜನಿಸುತ್ತದೆ ಎಂದು ಅವರು ಆತಂಕಗೊಂಡಿದ್ದರು.

ADVERTISEMENT

ಸಿಕಲ್ ಸೆಲ್ ಕಾಯಿಲೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯದ ಸಮಸ್ಯೆ. ಮನುಷ್ಯನ ದೇಹದಲ್ಲಿ ಬೀಟಾ-ಗ್ಲೋಬಿನ್ ಸರಣಿಯಲ್ಲಿರುವ ಏಕ ವರ್ಣತಂತುವಿನ ಸಮಸ್ಯೆಯಿಂದ ಉಂಟಾಗುತ್ತದೆ. ಮಗು ತನ್ನ ತಂದೆ, ತಾಯಿಯಿಂದ ತಲಾ ಒಂದೊಂದು ಅನಾರೋಗ್ಯಪೀಡಿತ ವರ್ಣತಂತು ಪಡೆದುಕೊಂಡಿದ್ದರೆ ಈ ಕಾಯಿಲೆಯೊಂದಿಗೆ ಜನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.