ADVERTISEMENT

‘ಹೃದಯ ಬೇನೆ ಯುವಕರಲ್ಲೇ ಹೆಚ್ಚು’

ಬಿಪಿಎಲ್ ಕಾರ್ಡ್ ಹೊಂದಿರದವರೆಲ್ಲ ಶ್ರೀಮಂತರಲ್ಲ: ಡಾ.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:56 IST
Last Updated 1 ಅಕ್ಟೋಬರ್ 2019, 19:56 IST
ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಮಂಜುನಾಥ್‌ ಮಾತನಾಡಿದರು. ಡಾ.ಯು.ಬೋಜಣ್ಣ, ಡಾ.ಎಂ.ಕೆ. ವೆಂಕಟೇಶ್, ಡಾ.ಎಚ್.ಎನ್.ಶಿವಶಂಕರ್ ಹಾಗೂ ಪ್ರೊ.ರಾಕೇಶ್ ಇದ್ದಾರೆ
ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಮಂಜುನಾಥ್‌ ಮಾತನಾಡಿದರು. ಡಾ.ಯು.ಬೋಜಣ್ಣ, ಡಾ.ಎಂ.ಕೆ. ವೆಂಕಟೇಶ್, ಡಾ.ಎಚ್.ಎನ್.ಶಿವಶಂಕರ್ ಹಾಗೂ ಪ್ರೊ.ರಾಕೇಶ್ ಇದ್ದಾರೆ   

ಕೆಂಗೇರಿ: ‘ಹೃದಯ ಬೇನೆಗೆ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಶೇ 25ರಷ್ಟು ರೋಗಿಗಳು 20ರಿಂದ 40ರ ನಡುವಿನ ವಯೋಮಾನದವರು. ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಇದಕ್ಕೆ ಕಾರಣ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.

ಇಲ್ಲಿನ ಚನ್ನಸಂದ್ರದಲ್ಲಿರುವ ಆರ್.ಎನ್.ಎಸ್. ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಮೈ ಮೈಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವ್ಯಾಯಾಮದ ಕೊರತೆಯು ಈ ಕಾಯಿಲೆ ಹೆಚ್ಚಾಗಲು ಕಾರಣ. ಅಲ್ಲದೆ,ಮಿತಿ ಮೀರಿದ ವಾಯುಮಾಲಿನ್ಯ ಧೂಮಪಾನಕ್ಕಿಂತ ಹೆಚ್ಚಿನ ದುರಂತ ಸೃಷ್ಟಿಸುತ್ತಿದೆ’ ಎಂದರು.

ಬಿಪಿಎಲ್‌ ಹೊಂದಿರದವರೆಲ್ಲ ಶ್ರೀಮಂತರಲ್ಲ:‘ಬಿಪಿಎಲ್ ಪಡಿತರ ಚೀಟಿ ಹೊಂ‌ದಿರದ ಬಡವರನ್ನು ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಹಲವು ಸವಲತ್ತುಗಳಿಂದ ವಂಚಿತಗೊಳಿಸುವುದು ಎಷ್ಟು ಸರಿ. ಈ ಕಾರ್ಡ್‌ ಹೊರದವರೆಲ್ಲ ಶ್ರೀಮಂತರಲ್ಲ’ ಎಂದು ಮಂಜುನಾಥ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.