ADVERTISEMENT

ಹೇರೋಹಳ್ಳಿ: ಆಂಜನೇಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 17:56 IST
Last Updated 1 ಫೆಬ್ರುವರಿ 2026, 17:56 IST
ಹೇರೋಹಳ್ಳಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಜರುಗಿತು.
ಹೇರೋಹಳ್ಳಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಜರುಗಿತು.   

ರಾಜರಾಜೇಶ್ವರಿನಗರ: ಪುರಾಣ ಪ್ರಸಿದ್ಧ ಹೇರೋಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಡಗರ, ಸಂಭ್ರಮದ ನಡುವೆ ಭಾನುವಾರ ಜರುಗಿತು.

ವಿವಿಧ ಹೋಮ, ಹವನ, ಪೂಜಾ ಕೈಂಕರ್ಯ ನಡೆಸಿದ ನಂತರ ರಥೋತ್ಸವಕ್ಕೆ ಶಾಸಕ ಎಸ್.ಟಿ.ಸೋಮಶೇಖರ್, ಪಶ್ಚಿಮ ನಗರ ಪಾಲಿಕೆ ಜಂಟಿ ಆಯುಕ್ತೆ ಆರತಿ ಆನಂದ್, ಉಪ ತಹಸಿಲ್ದಾರ್ ಸವಿತಾ, ಧರ್ಮದರ್ಶಿ ಸುರೇಶ್ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಭಕ್ತರು ಬಾಳೆ ಹಣ್ಣು, ಜವನ, ಬೇಲದ ಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು. ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ, ಪೂಜಾಕುಣಿತ, ಪಟ್ಟದಕುಣಿತ, ವೀರಗಾಸೆ ಗಮನ ಸೆಳೆದವು.

ADVERTISEMENT

ಎಸ್.ಟಿ. ಸೋಮಶೇಖರ್ ಅನ್ನ ಸಂತರ್ಪಣೆ ಮಾಡಿದರು. ಹಲವು ಕಡೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಸ್ಥಳೀಯರಾದ ರಘುನಂದನ್, ಹನುಮಂತರಾಜು, ವಿ.ರಘು, ಸೂರಿ, ಅಂಜನ್‍ಕುಮಾರ್, ಸವಿತಾ, ಅಂಜನಾನಗರ ಎಂ.ಗಂಗರಾಜು, ಮುದ್ದನಪಾಳ್ಯ ವಿ.ಅಶ್ವಥ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.