ADVERTISEMENT

ಚುನಾವಣೆ: ಬೇಡಿಕೆ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 20:18 IST
Last Updated 4 ಏಪ್ರಿಲ್ 2019, 20:18 IST
ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಮತಯಾಚನೆ ಮಾಡಿದರು. ಶಾಸಕ ಅರ್.ಮಂಜುನಾಥ್, ಮತ್ತು ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಮತಯಾಚನೆ ಮಾಡಿದರು. ಶಾಸಕ ಅರ್.ಮಂಜುನಾಥ್, ಮತ್ತು ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಇದ್ದರು.   

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಘಟನೆಯು ರಾಜಕೀಯ ಪಕ್ಷಗಳನ್ನುಒತ್ತಾಯಿಸಿದೆ.

ಬೇಡಿಕೆಗಳ ಪಟ್ಟಿಯನ್ನು ಅದು ಗುರುವಾರ ಬಿಡುಗಡೆ ಮಾಡಿದೆ.

ಪಂಚಾಯತ್‌ರಾಜ್‌ ಅಧಿನಿಯಮದಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡುವ ವಿವಿಧ ರೀತಿಯ ಅನುದಾನಗಳು ಮುಕ್ತವಾಗಿರಬೇಕು. ವೆಚ್ಚಗಳಿಗೆ ನಿರ್ಬಂಧ ವಿಧಿಸಬಾರದು. ಗ್ರಾಮ ಪಂಚಾಯಿತಿ ಬಜೆಟ್‌ ಪತ್ರ ಗ್ರಾಮಸಭೆಯ ಮಂಜೂರಾತಿಗೆ ಒಳಪಟ್ಟಿರಬೇಕು ಎಂದು ಮನವಿ ಮಾಡಿದೆ.

ADVERTISEMENT

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುವ ಕೂಲಿ ಹಾಗೂ ಸಾಮಗ್ರಿ ಖರೀದಿ ಅನುದಾನದ ಅನುಪಾತದ ಪ್ರಮಾಣ 60:40ರ ಬದಲಿಗೆ 70:30 ಆಗಬೇಕು. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ನಿರ್ಮಾಣವಾದ15 ವರ್ಷಗಳ ಬಳಿಕ ನೀಡುವ ದುರಸ್ತಿ ವೆಚ್ಚವನ್ನು ಹೆಚ್ಚಿಸಬೇಕು. ಪಂಚಾಯಿತಿ ಅಧ್ಯಕ್ಷರನ್ನು ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಾಹಕ ಎಂದು ಪರಿಗಣಿಸಿ ಸೂಕ್ತ ವೇತನ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.