ADVERTISEMENT

ವಿದೇಶಿ ಪ್ರಜೆಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 19:18 IST
Last Updated 25 ಡಿಸೆಂಬರ್ 2020, 19:18 IST

ಬೆಂಗಳೂರು: ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಉಪಕರಣ ಅಳವಡಿಸಿದ್ದ ಆರೋಪದಲ್ಲಿ ಬಂಧನದಲ್ಲಿರುವ ವಿದೇಶಿ ಪ್ರಜೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕೊಲಂಬಿಯಾದ ಕ್ರಿಸ್ಟಿನೊ ನವೊರ್ ಎಂಬುವರನ್ನು ಸಾರ್ವಜನಿಕರೇ ಹಿಡಿದು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಒಪ್ಪಿಸಿದ್ದರು. ಆರೋಪಿ ಮಹಿಳೆ ಎಂಬ ಅಂಶ ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ಕೃತ್ಯಕ್ಕೆ ಬಳಸಿದ ಸಾಧನಗಳು, ಪಾಸ್‌ಪೋರ್ಟ್ ಮತ್ತು ವೀಸಾ ವಶಪಡಿಸಿಕೊಳ್ಳಲಾಗಿದೆ.

ಸ್ಕಿಮ್ಮರ್‌ ಮತ್ತು ಕ್ಯಾಮರಾ ಅಳವಡಿಸುವ ಮುಲಕ ಮೊದಲಿಗೆ ಬಳಕೆದಾರರ ದತ್ತಾಂಶ ಸಂಗ್ರಹಿಸಿ ನಂತರ ನಕಲಿ ಎಟಿಎಂ ಕಾರ್ಡ್‌ ತಯಾರಿಸಿ ಹಣ ಪಾವತಿ ಮಾಡಿಕೊಳ್ಳಲಾಗುತ್ತಿತ್ತು. ಇದೇ ರೀತಿಯ 60 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

‘ಇದೇ ರೀತಿಯ ಕೃತ್ಯದಲ್ಲಿ ಮತ್ತೆ ಭಾಗಿಯಾದರೆ ಆರೋಪಿಗೆ ಮತ್ತೊಮ್ಮೆ ಜಾಮೀನು ಪಡೆಯುವ ಹಕ್ಕು ಇಲ್ಲವಾಗಲಿದೆ’ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಪೀಠ ಹೇಳಿದೆ.

‘ವಿಚಾರಣೆ ಮುಗಿಯುವ ತನಕ ಪ್ರತಿ ಭಾನುವಾರ ಯಲಹಂಕ ಠಾಣೆಗೆ ಹಾಜರಾಗಬೇಕು. ₹1 ಲಕ್ಷ ಮೊತ್ತದ ಎರಡು ಬಾಂಡ್‌ ನೀಡಬೇಕು’ ಎಂದು ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.