ADVERTISEMENT

ಡಿನೋಟಿಫಿಕೇಷನ್ ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:36 IST
Last Updated 6 ಏಪ್ರಿಲ್ 2021, 21:36 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬೇಗೂರು ಹೋಬಳಿ ಯೆಲ್ಲಕುಂಟೆ ಗ್ರಾಮದ 1 ಎಕರೆ 22 ಗುಂಟೆ ಭೂಮಿ ಡಿನೋಟಿಫಿಕೇಷನ್ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡಲು ಭೂಸ್ವಾಧೀನ ಕಾಯ್ದೆಯ ಕಾಯ್ದೆ ಸೆಕ್ಷನ್ 48(1)ರ ಪ್ರಕಾರ ಅಧಿಕಾರ ಇಲ್ಲ ಎಂದು ಪೀಠ ಹೇಳಿದೆ.

ವಸತಿ ಬಡಾವಣೆ ಉದ್ದೇಶದಿಂದ 50 ಎಕರೆ ಜಮೀನನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿತ್ತು. ಬಳಿಕ ಅದನ್ನು 2004ರಲ್ಲಿ ಐಟಿಐ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಹಸ್ತಾಂತರ ಮಾಡಲಾಗಿತ್ತು.

ಈ ನಡುವೆ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದಾಗಲೇ ಮೂಲ ಮಾಲೀಕರು 1 ಎಕರೆ 22 ಗುಂಟೆ ಭೂಮಿಯನ್ನು ಮಾರಿದ್ದರು. ಭೂಮಿ ಖರೀದಿ ಮಾಡಿದವರ ಕೋರಿಕೆ ಮೇರೆಗೆ 2010ರ ಸೆಪ್ಟೆಂಬರ್ 1ರಂದು ಡಿನೋಟಿಫೈ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಎತ್ತಿ ಹಿಡಿದಿತ್ತು.

ADVERTISEMENT

ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ, ’ಭೂಮಿ ಹಸ್ತಾಂತರ ಆದ ಬಳಿಕ ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅಧಿಕಾರ ಇಲ್ಲ' ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.