ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ತರಲಾಗಿರುವ ತಿದ್ದುಪಡಿಯಲ್ಲಿ ಮೃತ ವ್ಯಕ್ತಿಯ ವಿಧವಾ ಪತ್ನಿ ಮತ್ತು ತಾಯಿಯ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಪರಾಮರ್ಶೆ ಮಾಡುವ ಅಗತ್ಯ ಇದೆ’ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಿವಿಲ್ ಪ್ರಕರಣವೊಂದರಲ್ಲಿ ಗದಗ ಜಿಲ್ಲೆ ಹಿರೆಕೊಪ್ಪದ ಶರಣವ್ವ ಮತ್ತು ಕೊಪ್ಪಳ ಜಿಲ್ಲೆ ಚಿಕ್ಕಮ್ಯಾಗೇರಿಯ ಈಶ್ವರ ದೇವಪ್ಪ ಅಂಬಲಗಿ ಸಲ್ಲಿಸಿದ್ದ ಮೊದಲ ನಿಯಮಿತ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್.ದೇವದಾಸ್ ನೇತೃತ್ವದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.
ತೀರ್ಪಿನ ಪ್ರತಿಯನ್ನು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿಕೊಡುವಂತೆ ನ್ಯಾಯಪೀಠ ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಪಿತ್ರಾರ್ಜಿತ ಆಸ್ತಿ ವಿಭಾಗದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆ ರೋಣ ಹಿರಿಯ ಸಿವಿಲ್ ನ್ಯಾಯಾಲಯ ಅಸಲು ದಾವೆಯಲ್ಲಿ ನೀಡಿದ್ದ ತೀರ್ಪು ಮತ್ತು ಡಿಕ್ರಿಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.