
ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ನೀಡುವ ‘ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಪುರಸ್ಕಾರ’ಕ್ಕೆ ಹಿಂದೂಸ್ತಾನಿ ಗಾಯಕ ವಾಗೀಶ್ ಭಟ್ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರವು ₹10 ಸಾವಿರ ನಗದು ಒಳಗೊಂಡಿದೆ. ಟ್ರಸ್ಟ್ ಫೆ.1ರಂದು ಜಯನಗರದಲ್ಲಿರುವ ಜೆಎಸ್ಎಸ್ ಸಭಾಂಗಣದಲ್ಲಿ ದಾಸ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಲನಚಿತ್ರ ನಟ ಶ್ರೀನಿವಾಸ ಪ್ರಭು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಗೀತೋತ್ಸವದಲ್ಲಿ ಅನಂತ್ ಭಾಗವತ್, ಅಶ್ವಿನ್ ಬಾಳಿಗ, ಪ್ರಸನ್ನ ಕೊರ್ತಿ, ಅನನ್ಯ ಭಾರ್ಗವ್, ಶಿವಕುಮಾರ್ ಮಹಾಂತ್, ಅಮೃತೇಶ್ ಕುಲಕರ್ಣಿ, ನಾಗೇಂದ್ರ ರಾಣಾಪೂರ್, ಉಮಾ ಕುಲಕರ್ಣಿ, ಶ್ರೀನಿವಾಸ್ ಭಾಗವತ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಪಂಡಿತ್ ಸತೀಶ್ ಹಂಪಿಹೊಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.