ADVERTISEMENT

ಬೆಂಗಳೂರು | ಹಾಸ್ಮಾಟ್‌ ಆಸ್ಪತ್ರೆ ಸಂಸ್ಥಾಪಕರ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 16:20 IST
Last Updated 13 ಅಕ್ಟೋಬರ್ 2025, 16:20 IST
ನಗರದ ಹಾಸ್ಮಾಟ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು. ಶಾಸಕ ಹ್ಯಾರಿಸ್‌, ಈಜುಪಟು ನಿಶಾ ಮಿಲ್ಲೆಟ್‌, ಅನೀಶಾ ಚಾಂಡಿ ಎಕಾರ್ಟ್ ಹಾಜರಿದ್ದರು.
ನಗರದ ಹಾಸ್ಮಾಟ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು. ಶಾಸಕ ಹ್ಯಾರಿಸ್‌, ಈಜುಪಟು ನಿಶಾ ಮಿಲ್ಲೆಟ್‌, ಅನೀಶಾ ಚಾಂಡಿ ಎಕಾರ್ಟ್ ಹಾಜರಿದ್ದರು.   

ಬೆಂಗಳೂರು: ಅಶೋಕ ನಗರದಲ್ಲಿರುವ ಹಾಸ್ಮಾಟ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು.

ಸಂಸ್ಥಾಪಕರಾದ ಡಾ.‌ಥಾಮಸ್ ಚಾಂಡಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅಲ್ಲದೇ ಮಗ್ರಾತ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಹೊಸ ಒಪಿಡಿ ವಿಭಾಗ ಪ್ರಾರಂಭಿಸಲಾಗಿದೆ.

ಸಂಸ್ಥಾಪಕರ ದಿನದ ಭಾಗವಾಗಿ ಜಿಬಿಎ ಸಹಯೋಗದಲ್ಲಿ ಮಗ್ರಾತ್ ರಸ್ತೆ, ವಿವೇಕನಗರ ಮತ್ತು ವಿಕ್ಟೋರಿಯಾ ಲೇಔಟ್‌ನಲ್ಲಿ ಒಂದು ವಾರ ಕಾಲ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಲಾಯಿತು.

ಆಸ್ಪತ್ರೆಯ ಮೇಕ್ ಮಿ ವಾಕ್ ಯೋಜನೆ ಮೂಲಕ ಯುವ ಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ಪ್ರಕಟಿಸಲಾಯಿತು. 

ADVERTISEMENT

‌‌‘ಥಾಮಸ್‌ ಚಾಂಡಿ ಅವರು ಜನಾನುರಾಗಿ ವೈದ್ಯರಾಗಿ ಸೇವೆ ಮಾಡಿದರು. ಸಂಸ್ಥೆಗಳನ್ನು ಕಟ್ಟಿದರೂ ವಾಣಿಜ್ಯ ನೆಲೆಯಲ್ಲಿ ಎಂದೂ ನೋಡಲಿಲ್ಲ. ಈಗ ಅವರ ಮಕ್ಕಳು ತಂದೆಯ ಪರಂಪರೆ ಮುಂದುವರೆಸಿದ್ದಾರೆ’ ಎಂದು ಗಣ್ಯರು ನೆನಪಿಸಿಕೊಂಡರು.

ಬೆಂಗಳೂರು ಪ್ರಾಂತ್ಯದ ಆರ್ಚ್‌ಬಿಷಪ್ ಪೀಟರ್ ಮಚಾಡೊ, ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್, ಈಜು ಪಟು ನಿಶಾ ಮಿಲೆಟ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನೀಶಾ ಚಾಂಡಿ ಎಕಾರ್ಟ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.