ADVERTISEMENT

ಕನ್ನಡ ಸಾಹಿತ್ಯ ಪರಿಷತ್: ಎಚ್.ಎಸ್.ಸುರೇಶ್‌ಗೆ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 21:13 IST
Last Updated 16 ಸೆಪ್ಟೆಂಬರ್ 2025, 21:13 IST
   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಎ.ಆರ್.ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಕರ್ನಾಟಕ ಸರ್ವೋದಯ ಮಹಾಮಂಡಲದ ಅಧ್ಯಕ್ಷ ಡಾ.ಎಚ್.ಎಸ್.ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಗಾಂಧಿವಾದಿ ಎ.ಆರ್.ನಾರಾಯಣ ಘಟ್ಟ ಅವರು ಗಾಂಧೀಜಿ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ನಿಸ್ವಾರ್ಥ ಸಾಧಕರಿಗೆ ನೀಡಲು ಈ ಪುರಸ್ಕಾರವನ್ನು ಸ್ಥಾಪಿಸಿದ್ದಾರೆ.

2025ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ.ಎಚ್.ಎಸ್.ಸುರೇಶ್, ರಾಜ್ಯ ಸರ್ವೊದಯ ಮಹಾಮಂಡಲದ ಅಧ್ಯಕ್ಷರು ಹಾಗೂ ಬರಹಗಾರರು. ರಾಜ್ಯ ಜೂನಿಯರ್ ರೆಡ್ ಕ್ರಾಸ್ ಸಲಹೆಗಾರರಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ಕೇಂದ್ರದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿರುವ ಇವರು, ಗಾಂಧಿವಾದದ ಕುರಿತು ಮಹತ್ವದ ನಾಟಕಗಳನ್ನು ಬರೆದು ರಂಗಭೂಮಿಯ ಮೂಲಕ ಜಾಗೃತಿ ಉಂಟು ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.