ADVERTISEMENT

ನೈರುತ್ಯ ರೈಲ್ವೆ ಆದಾಯದಲ್ಲಿ ಭಾರಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 19:51 IST
Last Updated 3 ನವೆಂಬರ್ 2023, 19:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನೈರುತ್ಯ ರೈಲ್ವೆ ಆದಾಯದಲ್ಲಿ ಭಾರಿ ಹೆಚ್ಚಳವಾಗಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ₹ 4,288 ಕೋಟಿ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಯ ಆದಾಯಕ್ಕೆ ಹೋಲಿಸಿದರೆ ಶೇ 10.44ರಷ್ಟು ಅಧಿಕವಾಗಿದೆ. ಆದಾಯದಲ್ಲಿ ಇದು ಅತ್ಯುತ್ತಮ ಬೆಳವಣಿಗೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಪ್ರಯಾಣಿಕರ ಟಿಕೆಟ್‌ನಿಂದ ಬಂದ ಆದಾಯ ₹ 1,801 ಕೋಟಿ ಆಗಿದ್ದು, ಕಳೆದ ವರ್ಷದ ಈ ಅವಧಿಗಿಂತ ಶೇ 15.20 ರಷ್ಟು ಹೆಚ್ಚಳವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 27.49 ದಶಲಕ್ಷ ಟನ್ ಸರಕುಗಳನ್ನು ಸಾಗಿಸುವ ಮೂಲಕ ₹ 2,741 ಕೋಟಿ ಆದಾಯ ಗಳಿಸಿದೆ. ಸರಕು ಸಾಗಾಟದಲ್ಲಿ ಶೇ 11.66ರಷ್ಟು ಅಧಿಕ ಆದಾಯ ಬಂದಿದೆ.

ADVERTISEMENT

ವಿಭಾಗಗಳ ವ್ಯವಹಾರ ಅಭಿವೃದ್ಧಿ ಘಟಕಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅವಿರತ ಪ್ರಯತ್ನ, ಸಮರ್ಪಕ ನಿರ್ವಹಣೆಯಿಂದ ಈ ಸಾಧನೆ ಸಾಧ್ಯವಾಗಿದೆ. ನೈಋತ್ಯ ರೈಲ್ವೆ ಮಾರ್ಗಗಳ ದ್ವಿಪಥಿಕರಣ ಹಾಗೂ ವಿದ್ಯುದ್ದೀಕರಣವು ಸರಕು ರೈಲುಗಳ ಸಾಗಣೆ ಸಮಯವನ್ನು ಕಡಿಮೆ ಮಾಡಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.