ADVERTISEMENT

ಹುಕ್ಕಾ ಬಾರ್‌ ಮೇಲೆ ಸಿಸಿಬಿ ದಾಳಿ; 20 ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 19:41 IST
Last Updated 12 ಅಕ್ಟೋಬರ್ 2018, 19:41 IST
ಹುಕ್ಕಾ ಉಪಕರಣಗಳನ್ನು ಡಿಸಿಪಿ ಗಿರೀಶ್ ಅವರು ಪರಿಶೀಲಿಸಿದರು
ಹುಕ್ಕಾ ಉಪಕರಣಗಳನ್ನು ಡಿಸಿಪಿ ಗಿರೀಶ್ ಅವರು ಪರಿಶೀಲಿಸಿದರು   

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್‌ಗಳ ಮೇಲೆ ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, 30 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಡಿಸಿಪಿ ಗಿರೀಶ್ ನೇತೃತ್ವದ ತಂಡ, ಈ ದಾಳಿ ನಡೆಸಿತು. ಒರಾಯನ್ ಮಾಲ್‌ನಲ್ಲಿದ್ದ ಹುಕ್ಕಾ ಬಾರ್‌ ಸೇರಿದಂತೆ ನಗರದ ಹಲವೆಡೆಯ ಹುಕ್ಕಾ ಬಾರ್‌ಗಳಲ್ಲಿ ಪರಿಶೀಲನೆ ನಡೆಸಿ, ಅಕ್ರಮಗಳನ್ನು ಪತ್ತೆ ಹಚ್ಚಿತು.

ದಾಳಿ ನಡೆಯತ್ತಿದ್ದಂತೆ ಕೆಲವು ಬಾರ್‌ಗಳಲ್ಲಿ, ಹುಕ್ಕಾ ಉಪಕರಣಗಳನ್ನು ಮುಚ್ಚಿಡಲಾಯಿತು. ಅದನ್ನು ಗಮನಿಸಿದ ಅಧಿಕಾರಿಗಳು, ಬಾರ್‌ ಸಿಬ್ಬಂದಿಯನ್ನು ವಶಕ್ಕೆ ಪಡೆದು ಉಪಕರಣಗಳನ್ನೆಲ್ಲ ಜಪ್ತಿ ಮಾಡಿದರು. ದಾಳಿ ವೇಳೆ, ಹುಕ್ಕಾ ಸೇವಿಸುತ್ತಿದ್ದ ಕೆಲವು ಮಹಿಳೆಯರು ಸಿಕ್ಕಿಬಿದ್ದರು. ಅವರಿಗೆಲ್ಲ ಅಧಿಕಾರಿಗಳು, ಬುದ್ದಿವಾದ ಹೇಳಿದರು.

ADVERTISEMENT

‘ಮದ್ಯ ಸೇವನೆಗಷ್ಟೇ ಪರವಾನಗಿ ಪಡೆದಿದ್ದ ಬಾರ್‌ಗಳಲ್ಲಿ ಹುಕ್ಕಾ ಬಳಕೆ ಮಾಡಲಾಗುತ್ತಿತ್ತು. ಆ ಬಗ್ಗೆ ಮಾಹಿತಿ ಪಡೆದು, ಈ ದಾಳಿ ಮಾಡಿದೆವು. 35 ಹುಕ್ಕಾ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಬಾರ್‌ ಮಾಲೀಕರು ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.