ADVERTISEMENT

ಬೆಂಗಳೂರು: ನೀರು ಕೊಡದಿದ್ದಕ್ಕೆ ಲಟ್ಟಣಿಗೆಯಿಂದ ಹೊಡೆದು ಪತ್ನಿ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 15:18 IST
Last Updated 6 ಅಕ್ಟೋಬರ್ 2025, 15:18 IST
ಛೋಟೆಲಾಲ್ ಸಿಂಗ್‌ 
ಛೋಟೆಲಾಲ್ ಸಿಂಗ್‌    

ಬೆಂಗಳೂರು: ನೀರು ಕೊಡಲಿಲ್ಲ ಎಂದು ಕೋಪಗೊಂಡ ವ್ಯಕ್ತಿಯು ಲಟ್ಟಣೆಗೆಯಿಂದ ಪತ್ನಿಗೆ ಹೊಡೆದು ಕೊಲೆ ಮಾಡಿದ್ದಾನೆ. ಪೀಣ್ಯ ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಪ್ರೀತಿ ಸಿಂಗ್‌(26) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಪತಿ ಛೋಟೆಲಾಲ್ ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಧ್ಯಪ್ರದೇಶದ ಛೋಟೆಲಾಲ್ ಸಿಂಗ್ ಮತ್ತು ಪ್ರೀತಿ ಸಿಂಗ್ ನಾಲ್ಕು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಪೀಣ್ಯದಲ್ಲಿರುವ ಕಾರ್ಖಾನೆಯೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದು, ಚೊಕ್ಕಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

‌ಪ್ರೀತಿ ಸಿಂಗ್ ಕೆಲಸಕ್ಕೆ ಹೊರಟಿದ್ದರು. ಅದೇ ವೇಳೆ ಊಟ ಮಾಡುತ್ತಿದ್ದ ಛೋಟೆಲಾಲ್‌ ಸಿಂಗ್‌ ನೀರು ಕೊಡುವಂತೆ ಕೇಳಿದ್ದ. ‘ಕೆಲಸಕ್ಕೆ ಹೋಗಲು ತಡವಾಗುತ್ತಿದೆ. ನೀವೇ ನೀರು ತೆಗೆದುಕೊಂಡು ಕುಡಿಯಿರಿ’ ಎಂದು ‍ಪ್ರೀತಿ ಹೇಳಿದ್ದರು. ಮದ್ಯದ ಅಮಲಿನಲ್ಲಿದ್ದ ಆರೋಪಿ, ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

‘ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.