ADVERTISEMENT

ಬೆಂಗಳೂರು | ಹೈಡ್ರೊ ಗಾಂಜಾ: ಥಾಯ್ಲೆಂಡ್‌ನ ಐವರ ಬಂಧನ 

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 0:04 IST
Last Updated 20 ಫೆಬ್ರುವರಿ 2025, 0:04 IST
<div class="paragraphs"><p>ಬಂಧನ</p></div>

ಬಂಧನ

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಥಾಯ್ಲೆಂಡ್‌ನಿಂದ ವಿಮಾನದ ಮೂಲಕ ಹೈಡ್ರೊ ಗಾಂಜಾ ತಂದಿದ್ದ ಐವರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ(ಎನ್‌ಸಿಬಿ) ಅಧಿಕಾರಿಗಳು, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ADVERTISEMENT

ಬಂಧಿತರಿಂದ 20 ಕೆ.ಜಿ. ಹೈಡ್ರೊ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

‘ಬಂಧಿತರು 25ರಿಂದ 30 ವರ್ಷ ವಯಸ್ಸಿನ ಒಳಗಿನವರು. ಮಧ್ಯವರ್ತಿಗಳಿಂದ ಹೈಡ್ರೊ ಗಾಂಜಾವನ್ನು ಖರೀದಿಸಿ ಬೆಂಗಳೂರಿಗೆ ತಂದಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಎನ್‌ಸಿಬಿ ಹೇಳಿದೆ.

‘ನಗರದಲ್ಲಿರುವ ಡ್ರಗ್ಸ್ ಪೆಡ್ಲರ್‌ಗಳಿಗೆ ಹೈಡ್ರೊ ಗಾಂಜಾ ಪೂರೈಸಲು ವಿದೇಶದಿಂದ ತಂದಿದ್ದರು. ಹೈಡ್ರೊ ಗಾಂಜಾಕ್ಕೆ ದುಬಾರಿ ಬೆಲೆಯಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.