ADVERTISEMENT

ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಯೂನಿಟ್‌ ಇಂದು ಆರಂಭ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 19:53 IST
Last Updated 11 ಏಪ್ರಿಲ್ 2022, 19:53 IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ‘ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌’ ಘಟಕ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ‘ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌’ ಘಟಕ   

ಬೆಂಗಳೂರು: ಆಮ್ಲಜನಕದ ಮೂಲಕ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ‘ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿ’ ಘಟಕವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.

ಮಂಗಳವಾರ ಈ ಘಟಕಕ್ಕೆ ಚಾಲನೆ ದೊರೆಯಲಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕಕ್ಕೆ ₹3.5 ಕೋಟಿ ವೆಚ್ಚ ಮಾಡಲಾಗಿದ್ದು, ಅಮೆರಿಕದಿಂದ ಯಂತ್ರವನ್ನು ಆಮದು ಮಾಡಲಾಗಿದೆ.

ಒಂದೂವರೆಯಿಂದ ಎರಡು ಗಂಟೆ ಒಳಗೆ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಇದು ರೋಗಿಗಳ ಪರಿಸ್ಥಿತಿ ಮೇಲೆ ಅವಲಂಬನೆಯಾಗಿದೆ. ಏಕಕಾಲಕ್ಕೆ ಮೂರು ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಹೃದಯಾಘಾತ, ಕೋವಿಡ್‌ ಚಿಕಿತ್ಸೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಈ ಯಂತ್ರವನ್ನು ಬಳಸಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.