ADVERTISEMENT

ಹುಂಡೈನಿಂದ ರಸ್ತೆ ಸುರಕ್ಷತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:22 IST
Last Updated 5 ಫೆಬ್ರುವರಿ 2019, 19:22 IST

ಬೆಂಗಳೂರು: ಹುಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್ ಕಂಪನಿಯು ಜನರಿಗೆ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲುದೇಶದಾದ್ಯಂತ ‘#be the better guy’ ಅಭಿಯಾನವನ್ನು ಹಮ್ಮಿಕೊಡಿದೆ.

‘ದೇಶದಾದ್ಯಂತ ಫೆ. 10ರವರೆಗೂ ನಡೆಯಲಿರುವ ಈ ಅಭಿಯಾನದಲ್ಲಿ ಸಂಚಾರ ನಿಯಮಗಳನ್ನು ಅನುಸರಿ ಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ. ಇದು ಸಮಾಜದಲ್ಲಿ ಸಕಾ ರಾತ್ಮಕ ಬದಲಾವಣೆ ತರಲಿದೆ’ ಎಂದು ಕಂಪನಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಪುನೀತ್ ಆನಂದ್ ತಿಳಿಸಿದರು.

ವೇಗವಾಗಿ ಚಾಲನೆ ಮಾಡುವುದು, ಚಾಲನೆ ವೇಳೆ ಮೊಬೈಲ್‌ ಬಳಸುವುದು, ಸೀಟ್‌ ಬೆಲ್ಟ್‌ ಧರಿಸದಿರುವುದು, ಕುಡಿದು ವಾಹನ ಚಾಲನೆ ಮಾಡುವುದು, ಈ ರೀತಿ ನಿಯಮಾವಳಿ ಉಲ್ಲಂಘನೆ ಮಾಡದಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.