ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ಐಬಿಎಂ ಕ್ಯೂ2ಡಿ–ಐಬಿಎಂ ಗ್ಲೋಬಲ್ ಪ್ರವೇಶ ಪರೀಕ್ಷೆ ಪ್ರಾರಂಭಿಸಿದೆ.
ಬೆಂಗಳೂರಿನ ಎಸ್–ವ್ಯಾಸ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯವು ಎಂಬಿಎ, ಎಂಸಿಎ ಮತ್ತು ಎಂ.ಎಸ್‌ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಐಬಿಎಂ ಜೊತೆ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಯ ಈ ಮಾದರಿಯನ್ನು ಕಾರ್ಯಗತಗೊಳಿಸಿದ ದೇಶದ ಮೊದಲ ವಿಶ್ವವಿದ್ಯಾಲಯವಾಗಿದೆ.
ಐಬಿಎಂ ಗ್ಲೋಬಲ್ ಪ್ರವೇಶ ಪರೀಕ್ಷೆಯು (ಜಿಇಟಿ) ಎಂಬಿಎ, ಎಂಸಿಎ ಮತ್ತು ಎಂ.ಎಸ್‌ಸಿ ಕಂಪ್ಯೂಟರ್ ಸೈನ್ಸ್‌ಗೆ ಪ್ರವೇಶ ಪಡೆಯಲು ಐಬಿಎಂ ಕ್ಯೂ2ಡಿ ಅವಕಾಶ ಮಾಡಿಕೊಡಲಿದೆ. ಈ ಪರೀಕ್ಷೆಯ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳು ಐಬಿಎಂನ ಭವಿಷ್ಯದ ಪಠ್ಯಕ್ರಮದೊಂದಿಗೆ ಸಂಯೋಜಿಸಲ್ಪಟ್ಟ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಿಗೆ ದಾಖಲಾಗಬಹುದು.
ಕೆಂಗೇರಿಯ ಸತ್ವ ಗ್ಲೋಬಲ್ ಸಿಟಿ ಟೆಕ್ ಪಾರ್ಕ್‌ನಲ್ಲಿರುವ ಎಸ್–ವ್ಯಾಸ ಕ್ಯಾಂಪಸ್‌ನಲ್ಲಿ ಐಬಿಎಂ ಕ್ಯೂ2ಡಿ ಮಾಸ್ಟರ್ಸ್ ಪ್ರೊಗ್ರಾಮ್ಸ್ ಒದಗಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.