ADVERTISEMENT

ಅನಧಿಕೃತ ಫಲಕ ಕಂಡರೆ ವಾಟ್ಸ್ಆ್ಯಪ್ ಮಾಡಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 12:54 IST
Last Updated 9 ಜನವರಿ 2020, 12:54 IST

ಬೆಂಗಳೂರು: ‘ವಾಹನಗಳ ಮೇಲೆ ನೋಂದಣಿ ಸಂಖ್ಯೆ ಜತೆಗೆ ಅನಧಿಕೃತವಾಗಿ ಫಲಕಗಳನ್ನು ಅಳವಡಿಸಿಕೊಂಡಿರುವುದು ಕಂಡರೆ ವಾಟ್ಸ್‌ಆ್ಯಪ್ ಮಾಡಿ’ ಎಂದು ಸಾರಿಗೆ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

‘ಮಾನವ ಹಕ್ಕುಗಳ ಆಯೋಗಕ್ಕೆ ಹೋಲುವಂತೆ ಸಂಸ್ಥೆಯ ಹೆಸರು, ಚಿಹ್ನೆ, ಲಾಂಛನ ಹಾಗೂ ಯಾವುದೇ ಸಂಘಟನೆಯ ಹೆಸರನ್ನು ಹಾಕಿಕೊಳ್ಳುವುದು ಕೇಂದ್ರ ಮೋಟಾರು ವಾಹನ ನಿಯಮಗಳ ಉಲ್ಲಂಘನೆ. ಈ ರೀತಿಯ ವಾಹನಗಳು ರಸ್ತೆಯಲ್ಲಿ ಕಂಡರೆ ನೋಂದಣಿ ಸಂಖ್ಯೆ ಕಾಣಿಸುವಂತೆ ಚಿತ್ರಗಳನ್ನು ತೆಗೆದು 9449863459 ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿದರೆ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT