ADVERTISEMENT

ಚಂದ್ರಾಲೇಔಟ್‌ನಲ್ಲಿ ಅಕ್ರಮ ಶೆಡ್‌: ₹82 ಕೋಟಿ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 15:40 IST
Last Updated 15 ಜನವರಿ 2026, 15:40 IST
<div class="paragraphs"><p>ಚಂದ್ರಾಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ಬಿಡಿಎ ವತಿಯಿಂದ ತೆರವುಗೊಳಿಸಲಾಯಿತು.&nbsp;</p></div>

ಚಂದ್ರಾಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ಬಿಡಿಎ ವತಿಯಿಂದ ತೆರವುಗೊಳಿಸಲಾಯಿತು. 

   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯಾಚರಣೆ ನಡೆಸಿ, ಚಂದ್ರಾ ಲೇಔಟ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿ, ₹82 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ಉತ್ತರ ತಾಲ್ಲೂಕಿನ ಕಸಬಾ ಹೋಬಳಿಯ ಕೆಂಪಾಪುರ ಅಗ್ರಹಾರ ಗ್ರಾಮದ ಸರ್ವೆ ನಂಬರ್ 501/7, 501/9, 501/10 ಮತ್ತು 389/4ರಲ್ಲಿ (ಚಂದ್ರಾ ಲೇಔಟ್ ವ್ಯಾಪ್ತಿ) ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌, ಗ್ಯಾರೇಜ್, ಗೋದಾಮುಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಬಳಿಕ 33 ಗುಂಟೆ ಜಾಗವನ್ನು ಪ್ರಾಧಿಕಾರ ವಶಪಡಿಸಿಕೊಂಡಿತು.

ADVERTISEMENT

ಬಿಡಿಎ ಕಾರ್ಯಪಡೆಯ ಎಸ್‌ಪಿ, ಎಂಜಿನಿಯರ್ ಅಧಿಕಾರಿ–1, ಪಶ್ಚಿಮ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.