ADVERTISEMENT

ನೆಲಮಂಗಲ | ಮರಗಳ ಅಕ್ರಮ ಸಂಗ್ರಹ: ಅರಣ್ಯ ಇಲಾಖೆಯಿಂದ ವಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 14:33 IST
Last Updated 7 ಜುಲೈ 2025, 14:33 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ನೆಲಮಂಗಲ: ಕೆರೆಯ ದಡದಲ್ಲಿ ಒಣಗಿ ಬಿದ್ದಿದ್ದ ಮರಗಳನ್ನು ಕಡಿದು ಅಕ್ರವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಮೂವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಪ್ರಕರಣ ದಾಖಲಿಸಿಕೊಂಡು ಮರಗಳನ್ನು ವಶಕ್ಕೆ ಪಡೆದಿದ್ದಾರೆ.

ಗೋರಿನಬೆಲೆ ಕೆರೆ ದಡದಲ್ಲಿ ಒಣಗಿ ಬಿದ್ದಿದ್ದ ಅಕೇಶಿಯಾ ಮತ್ತು ಹರ್ಕ್ಯುಲಸ್‌ ಸೇರಿ ಒಟ್ಟು ಐದು ಮರಗಳನ್ನು ಕಡಿದು ಯಂಟಗಾನಹಳ್ಳಿಯ ಹನುಮಂತಯ್ಯ ಅವರ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಆರೋಪಿಗಳಾದ ಗೋರಿನಬೆಲೆಯ ಜಿ.ವಿನಯ್‌ಕುಮಾರ್‌, ಗಂಗರಾಜು, ಲಕ್ಷ್ಮಣ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಜಿ.ವಿನಯ್‌ಕುಮಾರ್‌ ಕಳೆದ ವಾರ ಮರಗಳನ್ನು ಕಡಿದು ಯಂಟಗಾನಹಳ್ಳಿಯ ಹನುಮಂತಯ್ಯ ಅವರ ತೋಟದಲ್ಲಿ ಸಂಗ್ರಹಿದ್ದ. ಆತನಿಗೆ ಗಂಗರಾಜು ಹಾಗೂ ಲಕ್ಷ್ಮಣ್‌ ಅವರು ನೆರವು ನೀಡಿದ್ದರು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.