ಬೆಂಗಳೂರು: ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ (ಮೈಕ್ರೋಫೀಡರ್ ಫ್ರಾಂಚೈಸಿ) ಕನಿಷ್ಠ ಖಚಿತ ಪ್ರೋತ್ಸಾಹ ಧನವನ್ನು ₹12,000 ದಿಂದ ₹16,320 ಕ್ಕೆ ಏರಿಕೆ ಮಾಡಲು ಇಂಧನ ಸಚಿವ ವಿ.ಸುನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಬಿಲ್ ವಿತರಣೆ ಮತ್ತು ವಸೂಲಾತಿ ಹೆಚ್ಚಿಸಲು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕಾರ್ಯಕ್ಷಮತೆ ಹೆಚ್ಚಿಸುವ ಕುರಿತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಶಿಫಾರಸು ಚರ್ಚಿಸಿ ತೀರ್ಮಾನಿಸಲಾಗಿದೆ.
ಇತರ ತೀರ್ಮಾನಗಳು: ಎಲ್‌ಟಿ–1(40 ಯುನಿಟ್‌ಗಳಿಗೆ/75 ಯುನಿಟ್ ಗಳಿಗೆ(ಎಸ್‌ಸಿ–ಎಸ್ಟಿ) ಮೇಲ್ಪಟ್ಟ ಸ್ಥಾವರ ಗಳು), ಎಲ್‌ಟಿ–2, ಎಲ್‌ಟಿ–3, ಎಲ್‌ಟಿ–4 (10 ಎಚ್‌ಪಿಗಿಂತ ಮೇಲ್ಪಟ್ಟ ಸ್ಥಾವರಗಳು), ಎಲ್.ಟಿ–5 (40 ಎಚ್‌ಪಿ ಸಾಮರ್ಥ್ಯಗಳವರೆಗೆ) ಸ್ಥಾವರಗಳ ಪ್ರಸಕ್ತ ತಿಂಗಳ ಬೇಡಿಕೆಯ ಶೇ 100 ರಷ್ಟು ವಸೂಲಿ ಮಾಡಿದಲ್ಲಿ ಕನಿಷ್ಠ ಖಚಿತ ಪ್ರೋತ್ಸಾಹ ಧನದ ಜತೆಗೆ ಈಗ ನೀಡುತ್ತಿರುವ ಹೆಚ್ಚುವರಿ ₹2,000 ಗಳನ್ನು ₹4,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ಖರೀದಿ ವೆಚ್ಚ, ₹2,400 ಮರುಪಾವತಿಸಲಾಗುವುದು. ಆದರೆ, ಗುಂಪು ವಿಮಾ ಯೋಜನೆ ಕುರಿತ ಅವಕಾಶಗಳ ಬಗ್ಗೆ ಪರಿಶೀಲಿಸುವಂತೆ ಎಸ್ಕಾಂಗಳಿಗೆ ಸೂಚಿಸ ಲಾಯಿತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.