ADVERTISEMENT

‘ದ್ವೇಷ, ಅಸೂಯೆ ತೊಲಗಿದಾಗ ದೇಶದ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 16:00 IST
Last Updated 15 ಆಗಸ್ಟ್ 2023, 16:00 IST
ಸರ್ಕಾರಿ ಶಾಲಾ ಮಕ್ಕಳಿಗೆ ‘ನಮ್ಮ ಕುಸುಮಾ ತಂಡ’ದಿಂದ ನೀಡಿದ ಸ್ಕೂಲ್‍ಬ್ಯಾಗ್‍ಗಳನ್ನು ಕೆ.ಎಂ.ಶೈಲೇಂದ್ರ ಹಾಗೂ ರವಿಕುಮಾರ್ ವಿತರಿಸಿದರು. ಎಚ್.ಕುಸುಮಾ, ಕೊಟ್ಟಿಗೇಪಾಳ್ಯ ಶೇಖರ್, ಡಾ.ಕೆ.ಟಿ.ರಾಜು ಇದ್ದರು.
ಸರ್ಕಾರಿ ಶಾಲಾ ಮಕ್ಕಳಿಗೆ ‘ನಮ್ಮ ಕುಸುಮಾ ತಂಡ’ದಿಂದ ನೀಡಿದ ಸ್ಕೂಲ್‍ಬ್ಯಾಗ್‍ಗಳನ್ನು ಕೆ.ಎಂ.ಶೈಲೇಂದ್ರ ಹಾಗೂ ರವಿಕುಮಾರ್ ವಿತರಿಸಿದರು. ಎಚ್.ಕುಸುಮಾ, ಕೊಟ್ಟಿಗೇಪಾಳ್ಯ ಶೇಖರ್, ಡಾ.ಕೆ.ಟಿ.ರಾಜು ಇದ್ದರು.   

ರಾಜರಾಜೇಶ್ವರಿನಗರ: ‘ದ್ವೇಷ, ಅಸೂಯೆ, ಜಾತಿ ವ್ಯವಸ್ಥೆ ತೊಲಗಿದಾಗ ದೇಶದ ಅಭಿವೃದ್ಧಿ ಸಾಧ್ಯ. ವಿಷಬೀಜ ಬಿತ್ತುವುದನ್ನು ಕೈಬಿಟ್ಟು ಶಾಂತಿ ವಾತಾವರಣ ನಿರ್ಮಾಣ ಮಾಡಬೇಕಾಗಿದೆ’ ಎಂದು ಕಾಂಗ್ರೆಸ್ ನಾಯಕಿ ಎಚ್‌. ಕುಸುಮಾ ಕರೆ ನೀಡಿದರು.

ಕೊಟ್ಟಿಗೇಪಾಳ್ಯ, ಮಾಳಗಾಳದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಮತ್ತು ಅಲ್ಲಿನ ಮಕ್ಕಳು ಪದವಿ ಪಡೆದು ಸ್ವಯಂ ಉದ್ಯೋಗ, ಸರ್ಕಾರಿ ಸೇವೆಗೆ ಸೇರಿ ಸಮಾಜಮುಖಿ ಸೇವೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಜೊತೆಗೆ ಗ್ರಾಮೀಣ ಭಾಗದ ಜಲ್ವಂತ ಸಮಸ್ಯೆಗಳಿಗೂ ಗಮನ ನೀಡಿ ಆದ್ಯತೆ ಮೇರೆಗೆ ಸರ್ಕಾರಿ ಶಾಲೆಗಳ ಅಭಿವೃದ್ದಿ, ಕುಡಿಯುವ ನೀರು, ಆರೋಗ್ಯ ಸೇವೆಗೆ ಗಮನ ನೀಡಲಾಗುತ್ತಿದೆ’ ಎಂದು ಬೆಂಗಳೂರು ರೋಟರಿ 3191 ಅಧ್ಯಕ್ಷ ಕೆ.ಎಂ.ಶೈಲೇಂದ್ರ ಹೇಳಿದರು.

ADVERTISEMENT

ಕೊಟ್ಟಿಗೇಪಾಳ್ಯ ಶೇಖರ್, ಅರ್ಪಿತ ಎಕ್ಸ್‌ಪೋರ್ಟ್‌ ಕಂಪನಿಯ ಮಾಲೀಕ ರವಿಕುಮಾರ್, ಬಿಬಿಎಂಪಿ ಮಾಜಿ ಸದಸ್ಯ ಜಿ.ಮೋಹನ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.