ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 15 ಲಕ್ಷ ಜನರಿಗೆ ದಿನಸಿ ಕಿಟ್ ವಿತರಿಸಲಾಗುವುದು ಎಂದು ರಾಬಿನ್ ಹುಡ್ ಆರ್ಮಿ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಸಂಚಾಲಕ ಯೂನೀಸ್ ಮಾತನಾಡಿ, ‘78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಸಂಕಲ್ಪ–78’ ಅಭಿಯಾನ ಹಮ್ಮಿಕೊಳ್ಳ ಲಾಗಿದೆ. ಆಗಸ್ಟ್ 1ರಿಂದ 15ರವರೆಗೆ ಈ ಅಭಿಯಾನ ನಡೆಯುತ್ತಿದ್ದು, ಐವರಿರುವ ಒಂದು ಕುಟುಂಬಕ್ಕೆ 10 ಕೆ.ಜಿ.ಯ ಒಂದು ಕಿಟ್ ವಿತರಿಸಲಾಗುತ್ತದೆ. ಪ್ರತಿ ಕಿಟ್‌ನಲ್ಲಿ 6 ಕೆ.ಜಿ. ಅಕ್ಕಿ, 2 ಕೆ.ಜಿ. ಬೇಳೆ, 2 ಕೆ.ಜಿ. ಗೋದಿ ಇರಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.