ADVERTISEMENT

ಹೀಗೆ ಮುಂದುವರಿದರೆ ಭಾರತ ಮತ್ತೊಂದು ಶ್ರೀಲಂಕಾವಾಗಲಿದೆ: ಅಭಿವೃದ್ಧಿ ಶಿಕ್ಷಣ ತಜ್ಞ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 21:28 IST
Last Updated 29 ಜುಲೈ 2022, 21:28 IST
ಬೆಂಗಳೂರಿನಲ್ಲಿ ಶುಕ್ರವಾರ ಎಐಡಿಎಸ್‌ಒ ಆಯೋಜಿಸಿದ್ದ ’ಸಾರ್ವಜನಿಕ ಶಿಕ್ಷಣ ಉಳಿಸಿ ದಿನ’ ಪ್ರತಿಭಟನಾ ಸಮಾವೇಶದಲ್ಲಿ ಸಂಘಟನೆಯ ಮುಖಂಡರಾದ ಕಲ್ಯಾಣ್ ಕುಮಾರ್, ಸಿ.ಎಂ.ಅಪೂರ್ವ, ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಮತ್ತು ವಿ.ಎನ್ ರಾಜಶೇಖರ್ ಚರ್ಚೆಯಲ್ಲಿ ತೊಡಗಿದ್ದರು
ಬೆಂಗಳೂರಿನಲ್ಲಿ ಶುಕ್ರವಾರ ಎಐಡಿಎಸ್‌ಒ ಆಯೋಜಿಸಿದ್ದ ’ಸಾರ್ವಜನಿಕ ಶಿಕ್ಷಣ ಉಳಿಸಿ ದಿನ’ ಪ್ರತಿಭಟನಾ ಸಮಾವೇಶದಲ್ಲಿ ಸಂಘಟನೆಯ ಮುಖಂಡರಾದ ಕಲ್ಯಾಣ್ ಕುಮಾರ್, ಸಿ.ಎಂ.ಅಪೂರ್ವ, ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಮತ್ತು ವಿ.ಎನ್ ರಾಜಶೇಖರ್ ಚರ್ಚೆಯಲ್ಲಿ ತೊಡಗಿದ್ದರು   

ಬೆಂಗಳೂರು: ಜಾತ್ಯತೀತ, ಸಮಾನತೆಯ ಶಿಕ್ಷಣ ವ್ಯವಸ್ಥೆ ನಾಶ ಮಾಡುವ ಮೂಲಕ ಸಂವಿಧಾನವನ್ನೇ ಬುಡಮೇಲು ಮಾಡಲಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಭಾರತ ಮತ್ತೊಂದು ಶ್ರೀಲಂಕಾವಾಗಲಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಎಚ್ಚರಿಸಿದರು.

ಈಶ್ವರಚಂದ್ರ ವಿದ್ಯಾಸಾಗರ ಸ್ಮರಣಾರ್ಥ ಶುಕ್ರವಾರ ಎಐಡಿಎಸ್‌ಒ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಡವರು, ಶೋಷಿತರು, ಕೂಲಿ ಕಾರ್ಮಿಕರು, ಪರಿಶಿಷ್ಟರ ಮಕ್ಕಳು ಸರ್ಕಾರಿ ಶಾಲೆ ಆಶ್ರಯಿಸಿದ್ದಾರೆ.ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಸಮಾನ ಶಿಕ್ಷಣಕ್ಕೆ ಪೆಟ್ಟು ಬೀಳುತ್ತದೆ. ಸಂಸದರು, ಶಾಸಕರು, ರಾಜಕಾರಣಿಗಳ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಟೀಕಿಸಿದರು.

ADVERTISEMENT

ಎಐಡಿಎಸ್ಒ ಅಖಿಲ ಭಾರತ ಅಧ್ಯಕ್ಷ ವಿ.ಎನ್. ರಾಜಶೇಖರ್, ಈಶ್ವರಚಂದ್ರ ವಿದ್ಯಾಸಾಗರ ಅವರ ಸ್ಮರಣೆ ದಿನದಂದು ವಿದ್ಯಾರ್ಥಿ
ಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕು ಎಂಬ ಸಂಕಲ್ಪದೊಂದಿಗೆ ಚಳವಳಿ ಆರಂಭಿಸಿದ್ದಾರೆ. ಸಂಘ ಪರಿವಾರದ ಸಿದ್ಧಾಂತಕ್ಕೆ ಅನುಗುಣವಾಗಿ ಕೇಂದ್ರದ ಬಿಜೆಪಿ ಸರ್ಕಾರ ಶೈಕ್ಷಣಿಕ ನೀತಿಗಳನ್ನು ರಚಿಸುತ್ತಿದೆ. ಸರ್ಕಾರದ ಇಂತಹ ನಡೆ ವಿರುದ್ಧ ನಿರಂತರ ಚಳವಳಿ ಅಗತ್ಯ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಅಭಯಾ ದಿವಾಕರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಅಪೂರ್ವ, ಕಾರ್ಯದರ್ಶಿ ಕಲ್ಯಾಣ್ ಕುಮಾರ್,ವಿನಯ್ ಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.