ADVERTISEMENT

ವಿಭಜನೆ ಘಟನೆಯ ಸ್ಮರಣೆ: ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 21:29 IST
Last Updated 14 ಆಗಸ್ಟ್ 2022, 21:29 IST
ಬಿಬಿಎಂಪಿ ಆಯೋಜಿಸಿದ್ದ ವಿಭಜನೆ ದುರಂತದ ಸ್ಮರಣೆ ಕುರಿತ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ನಾಗರಿಕರು
ಬಿಬಿಎಂಪಿ ಆಯೋಜಿಸಿದ್ದ ವಿಭಜನೆ ದುರಂತದ ಸ್ಮರಣೆ ಕುರಿತ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ನಾಗರಿಕರು   

ಬೆಂಗಳೂರು: ಬಿಬಿಎಂಪಿಯ ಎಲ್ಲ ವಲಯಗಳಲ್ಲಿ ಜಾಗೃತಿ ಅಭಿಯಾನ ಹಾಗೂ ವಿಭಜನೆ ದುರಂತದ ಸ್ಮರಣೆಯ ಛಾಯಾಚಿತ್ರ ಪ್ರದರ್ಶನವನ್ನು ಭಾನುವಾರ ಆಯೋಜಿಸಲಾಗಿತ್ತು.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಿಂದ ನೊಂದ ಲಕ್ಷಾಂತರ ಜನರ ಸಂಕಟ, ನೋವು ಮತ್ತು ನೋವನ್ನು ಬೆಳಕಿಗೆ ತರುವ ಸಲುವಾಗಿ ‘ವಿಭಜನೆಯ ದುರಂತದ ಸ್ಮರಣೆಯ ದಿನ’ ಆಯೋಜಿಸಲಾಗುತ್ತದೆ.

ಯಲಹಂಕ ವಲಯದ ಆರ್.ಎಂ.ಝಡ್ ಗ್ಯಾಲೆರಿಯಾ, ದಾಸರಹಳ್ಳಿ‌ ವಲಯ ಶೆಟ್ಟಿಹಳ್ಳಿಯ ಶಿವಕುಮಾರ ಸ್ವಾಮೀಜಿ ಯೋಗಮಂದಿರ, ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಬಿಡಿಎ ಕಾಂಪ್ಲೆಕ್ಸ್, ಮಹದೇವಪುರ ವಲಯದ ಫಿನಿಕ್ಸ್ ಮಾಲ್, ಆರ್.ಆರ್.ನಗರ ವಲಯ ಯಶವಂತಪುರದಲ್ಲಿನ ರಾಯಲ್ ಮಾರ್ಟ್ ಬಳಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ADVERTISEMENT

ಎಚ್.ಎಸ್.ಆರ್ ಬಿಡಿಎ ಕಾಂಪ್ಲೆಕ್ಸ್ ಬಳಿ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನಕ್ಕೆ ಸುರಾನಾ ವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ ನೀಡಿ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.

ಜಾಗೃತಿ ಜಾಥಾ: ಬಿಬಿಎಂಪಿಯ ಎಲ್ಲಾ ವಾಡ್೯ಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಪೂರ್ವ ವಲಯದ ಭಾರತ್ ಸ್ಕೌಟ್ಸ್ ಮತ್ತು ಗೈ‌ಡ್ಸ್‌ನ 3 ಸಾವಿರ ವಿದ್ಯಾರ್ಥಿಗಳು ಮತ್ತು ಎಸ್.ಪಿ.ಸಿ, ಎನ್.ಎಸ್.ಎಸ್ ಮತ್ತು ಶಾಲಾ ಕಾಲೇಜು ಸಮವಸ್ತ್ರ 2 ಸಾವಿರ ಸೇರಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳುಜಾಥಾದಲ್ಲಿ ಭಾಗವಹಿಸಿದ್ದರು.

ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಿಕ್ಷಣ ಸಂಸ್ಥೆಗಳ ಆವರಣದಿಂದ ಪ್ರಾರಂಭವಾದ ಜಾಥಾ ಫ್ರೇಜರ್ ಟೌನ್‌ನ ಪ್ರಮುಖ ರಸ್ತೆಗಳಲ್ಲಿ ಸಾಗಿದ್ದು, ಬ್ಯಾಂಡ್ ಸೆಟ್, ತಮಟೆ ವಾದನ ಗಮನಸೆಳೆದವು.ರಾಜಾಜಿನಗರ, ಪದ್ಮನಾಭನಗರ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.