ADVERTISEMENT

ಸ್ಮಿತಾಗೆ ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:37 IST
Last Updated 29 ಡಿಸೆಂಬರ್ 2020, 20:37 IST
ಕಾರ್ಯಕ್ರಮದಲ್ಲಿ ಸ್ಮಿತಾ ರಾಜು ಜಿ. ಅವರಿಗೆ ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಮಿತಾ ರಾಜು ಜಿ. ಅವರಿಗೆ ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಬೆಂಗಳೂರು: ಎಲಿಕ್ಸಿರ್ ಪ್ರೊಡಕ್ಷನ್ ಹೌಸ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ಮಿಸ್, ಮಿಸ್ಟರ್ ಮತ್ತು ಮಿಸೆಸ್ ಎಲಿಕ್ಸಿರ್ ಇಂಡಿಯಾ ಸೂಪರ್ ಮಾಡೆಲ್ ಹಂಟ್’ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜೆ.ಪಿ.ನಗರದಸ್ಮಿತಾ ರಾಜು ಜಿ. (36) ಅವರು ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಕಿರೀಟ ಮುಡಿಗೇರಿಸಿಕೊಂಡರು.

‘ಈ ಸ್ಪರ್ಧೆಯ ಮೂಲಕ ವಿಚ್ಛೇದಿತ ಮಹಿಳೆಯರು ಹಾಗೂ ಒಂಟಿ ತಾಯಂದಿರ ಪ್ರತಿಭೆ ಹೊರಹೊಮ್ಮಲು ಸಂಸ್ಥೆಯು ವಿಶೇಷ ವೇದಿಕೆ ಕಲ್ಪಿಸಿತ್ತು. ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದುಸ್ಮಿತಾ ಸಂತಸ ಹಂಚಿಕೊಂಡರು.

ಇದೇ ಸ್ಪರ್ಧೆಯ ‘ಮಿಸೆಸ್ ಟ್ಯಾಲೆಂಟ್’ ವಿಭಾಗದಲ್ಲಿಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರುತಿ ಪ್ರಶಸ್ತಿ ಪಡೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.