ADVERTISEMENT

ಇಂಡಿಯನ್‌ ಅಕಾಡೆಮಿ ಪದವಿ ಕಾಲೇಜು ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 2:01 IST
Last Updated 24 ನವೆಂಬರ್ 2021, 2:01 IST
ಬಿಎಸ್ಸಿಯಲ್ಲಿ ಅಧಿಕ ಅಂಕ ಗಳಿಸಿರುವ ಮೋನಿದೀಪಾ ಗುಹಾ ಅವರಿಗೆ ಎಚ್‌.ಪಿ.ಖಿಂಚಾ ಮತ್ತು ಟಿ.ಸೋಮಶೇಖರ್‌ ಅವರು ಪದವಿ ಪ್ರದಾನ ಮಾಡಿದರು
ಬಿಎಸ್ಸಿಯಲ್ಲಿ ಅಧಿಕ ಅಂಕ ಗಳಿಸಿರುವ ಮೋನಿದೀಪಾ ಗುಹಾ ಅವರಿಗೆ ಎಚ್‌.ಪಿ.ಖಿಂಚಾ ಮತ್ತು ಟಿ.ಸೋಮಶೇಖರ್‌ ಅವರು ಪದವಿ ಪ್ರದಾನ ಮಾಡಿದರು   

ಬೆಂಗಳೂರು: ಇಂಡಿಯನ್‌ ಅಕಾಡೆಮಿ ಪದವಿ ಕಾಲೇಜು (ಐಎಡಿಸಿ) ಹೆಣ್ಣೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2021ನೇ ಸಾಲಿನಲ್ಲಿ ತೇರ್ಗಡೆಯಾದ 599 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ ಅಗ್ರಶ್ರೇಯಾಂಕ ಪಡೆದಿದ್ದ 16 ಮಂದಿ ಹಾಗೂ ಒಟ್ಟಾರೆಯಾಗಿ ರ‍್ಯಾಂಕ್‌ ಪಡೆದಿದ್ದ ಇಬ್ಬರಿಗೆ ಪದವಿ ಫಲಕ ನೀಡಲಾಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿಶ್ರಾಂತ ಕುಲಪತಿ ಎಚ್‌.ಪಿ.ಖಿಂಚಾ ಅವರು ಪದವಿ ಪ್ರದಾನ ಮಾಡಿದರು.

‘ಐಎಡಿಸಿ ಈಗ ಬೃಹದಾಕಾರವಾಗಿ ಬೆಳೆದಿದೆ. ಆರು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ತಾಣವಾಗಿ ಮಾರ್ಪಟ್ಟಿದೆ. ಅನೇಕ ವಿದ್ಯಾರ್ಥಿಗಳು ಪದವಿ ಮುಗಿಸಿದ ಕೂಡಲೇ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ’ ಎಂದುಐಎಡಿಸಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಟಿ.ಸೋಮಶೇಖರ್‌ ತಿಳಿಸಿದರು.

ADVERTISEMENT

ಐಎಡಿಸಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಟಿ.ಭಾರತಿ, ಕಾಲೇಜಿನ ಪ್ರಾಂಶುಪಾಲ ಶ್ರೀನಿಧಿ ಕೆ.ಪಾರ್ಥಸಾರಥಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.