ADVERTISEMENT

ರೈಲಿನಲ್ಲಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:47 IST
Last Updated 16 ಮೇ 2025, 15:47 IST
ಆರೋಪಿ ಎಂ.ಗುಣಶೇಖರ್‌ ಹಾಗೂ ಜಪ್ತಿ ಮಾಡಿಕೊಂಡ ಲ್ಯಾಪ್‌ಟಾಪ್‌ 
ಆರೋಪಿ ಎಂ.ಗುಣಶೇಖರ್‌ ಹಾಗೂ ಜಪ್ತಿ ಮಾಡಿಕೊಂಡ ಲ್ಯಾಪ್‌ಟಾಪ್‌    

ಬೆಂಗಳೂರು: ರೈಲಿನಲ್ಲಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಠಾಣೆಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸಿಂಗಲಗುಂಟಾದ ಎಂ.ಗುಣಶೇಖರ್‌ (43) ಬಂಧಿತ ಆರೋಪಿ.

ಆರೋಪಿಯಿಂದ ವಿವಿಧ ಕಂಪನಿಯ ಐದು ಲ್ಯಾಪ್‌ಟಾಪ್‌, ಒಂಬತ್ತು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹5.94 ಲಕ್ಷ ಎಂದು ಅಂದಾಜಿಸಲಾಗಿದೆ.

ADVERTISEMENT

ಏಪ್ರಿಲ್‌ 7ರಂದು ಕೆ.ಆರ್‌. ಪುರದ ರೈಲು ನಿಲ್ದಾಣದಿಂದ ಹೊರಟಿದ್ದ ಎರ್ನಾಕುಲಂ–ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆರೋಪಿ ಕಳ್ಳತನ ಮಾಡಿದ್ದ. ಮಹಿಳಾ ಪ್ರಯಾಣಿಕರೊಬ್ಬರು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಮೊಬೈಲ್‌ ಲೊಕೇಷನ್ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. ರೈಲು ಪ್ರಯಾಣಿಕರಿಂದ ಕಳ್ಳತನ ಮಾಡಿದ್ದ ಲ್ಯಾಪ್‌ಟಾ‍‍ಪ್ ಹಾಗೂ ಮೊಬೈಲ್‌ ಫೋನ್‌ಗಳನ್ನು ತಮಿಳುನಾಡಿನ ಈರೋಡ್‌ನಲ್ಲಿ ಮಾರಾಟ ಮಾಡಿದ್ದ. ಅಂಗಡಿ ಮಾಲೀಕನನ್ನು ಪತ್ತೆಹಚ್ಚಿ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.