
ಬೆಂಗಳೂರು: ಇಂದಿರಾನಗರದ 18ನೇ ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಪಾದಚಾರಿ ಮಾರ್ಗದತ್ತ ನುಗ್ಗಿದ್ದು, ಅಲ್ಲಿದ್ದ ಆರು ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಜ.8ರಂದು ರಾತ್ರಿ 11.34ರ ಸುಮಾರಿಗೆ ಅವಘಾತ ಸಂಭವಿಸಿದೆ.
ರಸ್ತೆ ಪಕ್ಕದಲ್ಲಿನ ಹೋಟೆಲ್‌ನಲ್ಲಿರುವ ಸಿಸಿಸಿಟಿ ಕ್ಯಾಮೆರಾದಲ್ಲಿ ರಸ್ತೆಯ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ಆ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡೇರಿಕ್ ಟೋನಿ (42) ಕಾರು ಚಾಲನೆ ಮಾಡುತ್ತಿದ್ದರು. ಕಾರನ್ನು ಎಡ ಭಾಗಕ್ಕೆ ತೆಗೆದುಕೊಳ್ಳುವ ಬದಲಿಗೆ ಬಲಕ್ಕೆ ತೆಗೆದುಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು, ವಿಭಜಕದ ಮೇಲೆ ಹತ್ತಿ ರಸ್ತೆಯ ಮತ್ತೊಂದು ಬದಿಗೆ ಹಾರಿ ಬಂದು ಹೋಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿದೆ. ಊಟ ಮುಗಿಸಿಕೊಂಡು ಹೋಟೆಲ್ ಮುಂದೆ ನಿಂತಿದ್ದವರು ತಕ್ಷಣವೇ ಪಕ್ಕಕ್ಕೆ ಜಿಗಿದು ಪಾರಾಗಿದ್ದಾರೆ.
ಚಾಲಕ ಮದ್ಯಪಾನ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂಬುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಜೀವನ್‌ವಿಮಾ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.